ಪಂಜಾಬ್ , ಸೆ 15 (DaijiworldNews/MS): ಪಾಕಿಸ್ತಾನದ ಮಾಜಿ ಅಂಪೈರ್ ಅಸದ್ ರೌಫ್ ಸೆ. 15 ಗುರುವಾರ ಹಠಾತ್ ಹೃದಯ ಸ್ತಂಭನದಿಂದ ತಮ್ಮ 66ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಕ್ರಿಕೆಟ್ ನಿಂದ ದೂರವಾದ ಬಳಿಕ ರವುಫ್ ಅವರು ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಅನುಭವಿ ಅಂಪೈರ್ ಲಾಹೋರ್ನ ಲಾಂಡಾ ಬಜಾರ್ನಲ್ಲಿ ತನ್ನ ಬಟ್ಟೆ ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಅಸ್ವಸ್ಥತರಾದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಿಸದೇ ಅಸದ್ ರೌಫ್ ನಿಧನರಾದರು. ಅವರ ಸಹೋದರ ತಾಹಿರ್ ಹೇಳಿದ್ದಾರೆ.
ರವುಫ್ ಅವರು 1998 ರಲ್ಲಿ ತಮ್ಮ ಅಂಪೈರಿಂಗ್ ಪಯಣವನ್ನು ಪ್ರಾರಂಭಿಸಿದರು. 2004 ರಲ್ಲಿ ರವುಫ್ ಅವರನ್ನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂಪೈರ್ಗಳ ಸಮಿತಿಗೆ ಸೇರಿಸಲಾಯಿತು.ಅಸದ್ ರವುಫ್ ಅವರು 47 ಟೆಸ್ಟ್, 98 ಏಕದಿನ ಮತ್ತು 23 ಟಿ20 ಅಂತಾರಾಷ್ಟ್ರೀಯ ಗಳಲ್ಲಿ ಅಂಪೈರ್ ಗಳಾಗಿ ಕಾರ್ಯನಿರ್ವಹಿಸಿದರು. ಐಪಿಎಲ್ ನಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ 2013ರಲ್ಲಿ ಅಸದ್ ರವುಫ್ ವಿರುದ್ದ ಫಿಕ್ಸಿಂಗ್ ಆರೋಪ ಕೇಳಿಬಂದ ಬಳಿಕ ಅವರ ವೃತ್ತಿಜೀವನವು ಅವನತಿಗೆ ಹೋಯಿತು.
ಉತ್ತಮ ಅಂಪೈರ್ ಆಗಿದ್ದಲ್ಲದೆ, ರವುಫ್ ಪಾಕಿಸ್ತಾನದಲ್ಲಿ ಹೆಸರಾಂತ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು.