ಚೆನ್ನೈ, ಸೆ 17 (DaijiworldNews/DB): ರೊಮೇನಿಯಾದ ಮಾಮಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರು ಮೂಲದ ಪ್ರಣವ್ ಆನಂದ್ ಭಾರತದ 76ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
15 ವರ್ಷದ ಪ್ರಣವ್ ಅವರು 2,500 ಎಲೋ ಗಡಿ ದಾಟಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಗ್ರ್ಯಾಂಡ್ಮಾಸ್ಟರ್ ಟೈಟಲ್ ಪಡೆಯಲು 2,500 ಎಲೋ ಪಾಯಿಂಟ್ಗಳ ಲೈವ್ ರೇಟಿಂಗ್ನ್ನು ಕ್ರಮಿಸಬೇಕಾಗಿತ್ತು. ಇದೀಗ ಈ ಚಾಂಪಿಯನ್ ಶಿಪ್ ಮೂಲಕ ಅರ್ಹತೆಯನ್ನು ಪ್ರಣವ್ ಪೂರ್ಣಗೊಳಿಸಿದ್ದು, ಗ್ರಾಂಡ್ ಮಾಸ್ಟರ್ ಆಗಿದ್ದಾರೆ.
ಕಳೆದ ಜುಲೈನಲ್ಲಿ ಸ್ವಿಟ್ಜರ್ಲೆಂಡ್ನಲ್ಲಿ ನಡೆದ 55 ನೇ ಬಿಯೆಲ್ ಚೆಸ್ ಫೆಸ್ಟಿವಲ್ನಲ್ಲಿ ಪ್ರಣವ್ ಅವರು ಮೂರನೇ ಮತ್ತು ಅಂತಿಮ ಗ್ರ್ಯಾಂಡ್ಮಾಸ್ಟರ್ ನಾರ್ಮ್ನ್ನು ತಮ್ಮದಾಗಿಸಿಕೊಂಡಿದ್ದರು. ಆನಂದ್ ಅವರ ಚೆಸ್ ಮೇಲಿನ ಆಸಕ್ತಿ ಹಾಗೂ ಕ್ರೀಡಾ ನೈಪುಣ್ಯವನ್ನು ಅವರ ತರಬೇತುದಾರರು ಶ್ಲಾಘಿಸಿದ್ದಾರೆ.