ನವದೆಹಲಿ, ಸೆ 18 (DaijiworldNews/DB): ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಮೊಹಾಲಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ತಂಡದ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಪರ ಶಮಿ ಬೌಲಿಂಗ್ ಮಾಡಬೇಕಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿರುವುದರಿಂದ ಶಮಿ ಆಡುವುದು ಅನುಮಾನವಾಗಿದೆ. ಸದ್ಯ ಉಮೇಶ್ ಯಾದವ್ ಅವರಿಗೆ ಶಮಿ ಬದಲಾಗಿ ಬುಲಾವ್ ನೀಡಲಾಗಿದೆ ಎನ್ನಲಾಗಿದೆ. ಸೆಪ್ಟಂಬರ್ 20 ರಿಂದ ಪಂದ್ಯ ನಡೆಯಲಿದೆ.
ಟಿ20ಯಿಂದ ಕೆಲ ದಿನಗಳಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಅವರು ಹಲವು ದಿನಗಳ ಬಳಿಕ ಆಸಿಸ್ ವಿರುದ್ದದ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ಇದೀಗ ಅವರಿಗೆ ಇದರಲ್ಲಿ ಆಡುವ ಅವಕಾಶವೂ ಹೋಗಿದೆ. ಸದ್ಯ ಶಮಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.