ದೆಹಲಿ, ಸೆ 20 (DaijiworldNews/HR): ಏಷ್ಯನ್ ಗೇಮ್ಸ್ ಪದಕ ವಿಜೇತೆ, ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮಗೆ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯು ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ ಅವರು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ರದ್ದು ಮಾಡಿದ್ದ ಉತ್ತೇಜಕ ಮೀಥೈಲ್ಹೆಕ್ಸಾನಿಯಮೈನ್ಗೆ ತೆಗೆದುಕೊಂಡಿದ್ದು ಪಾಸಿಟಿವ್ ಬಂದ ಕಾರಣ ಅವರನ್ನು ಮೂರು ತಿಂಗಳ ಅಮಾನತುಗೊಳಿಸಿತ್ತು.
ಇನ್ನು ಶಿಸ್ತಿನ ಸಮಿತಿಯ ನಿರ್ಧಾರದ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿ (ನಾಡಾ) ಮೇಲ್ಮನವಿ ಸಲ್ಲಿಸಿದ್ದು, ನಾಡಾದ ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ವಿಚಾರಣೆ ಮೇಲ್ಮನವಿ ಅಂಗೀಕರಿಸಿದ ಬಳಿಕ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ ನೀಡಿದೆ.