ನವದೆಹಲಿ, ಸೆ 24 (DaijiworldNews/DB): ಮುಂಬರುವ ರಣಜಿ ಟೂರ್ನಿಗಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಭರ್ಜರಿ ತಯಾರಿ ಆರಂಭಿಸಿದ್ದಾರೆ. ವಿಶೇಷ ಎಂದರೆ ಇವರಿಗೆ ತರಬೇತಿ ನೀಡುತ್ತಿರುವವರು ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
ಅರ್ಜುನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಮುಂಬೈ ತಂಡಕ್ಕೆ ವಿದಾಯ ಹೇಳಿ ಗೋವಾ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿವರೆಗೆ ಅರ್ಜುನ್ ತೆಂಡೂಲ್ಕರ್ಗೆ ಅಷ್ಟೇನು ಅವಕಾಶಗಳು ಸಿಕ್ಕಿರಲಿಲ್ಲ. ಹೀಗಾಗಿ ಗೋವಾ ತಂಡ ಸೇರಿದ ಬಳಿಕ ಬರುವ ರಣಜಿ ಟೂರ್ನಿಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ ಅರ್ಜುನ್. ಗೋವಾ ಕ್ರಿಕೆಟ್ ಅಸೋಸಿಯೇಶನ್ ತರಬೇತಿ ಕ್ಯಾಂಪ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಲ್ಲದೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರ ಚಂಢೀಘಡದಲ್ಲಿರುವ ಯೋಗರಾಜ್ ಸಿಂಗ್ ಅವರ ಡಿಎವಿ ಕಾಲೇಜಿನ ಅಕಾಡೆಮಿಯಲ್ಲಿ ಅರ್ಜುನ್ ತರಬೇತಿ ಪಡೆಯುತ್ತಿದ್ದಾರೆ.
ಬ್ಯಾಟಿಂಗ್ ಕೌಶಲವನ್ನು ಸುಧಾರಿಸುವ ಅಗತ್ಯತೆ ಅರ್ಜುನ್ ತೆಂಡೂಲ್ಕರ್ಗಿದ್ದು, ಅರ್ಜುನ್ ಆಟದ ಕುರಿತಂತೆ ಮಾತನಾಡಿರುವ ತಂದೆ ಸಚಿನ್ ತೆಂಡೂಲ್ಕರ್, ಆಯ್ಕೆ ಬಗ್ಗೆಆತ ಗಮನ ಹರಿಸಬಾರದು. ಆಟದ ಕುರಿತು ಹೆಚ್ಚು ಗಮನ ನೀಡಬೇಕು. ಆಯ್ಕೆ ಮಾಡುವುದು, ಬಿಡುವುದು ಮ್ಯಾನೇಜ್ಮೆಂಟ್ಗೆ ಬಿಟ್ಟ ವಿಚಾರ ಎಂದಿದ್ದಾರೆ.