ಆಸ್ತಾನ (ಕಝಕಸ್ತಾನ), ಸೆ 30 (DaijiworldNews/DB): ವಿಶ್ವ ಚೆಸ್ ಸಂಸ್ಥೆ (ಫಿಡೆ) ಆಯೋಜಿಸಿರುವ ಮಹಿಳಾ ಫಿಡೆ ಗ್ರ್ಯಾನ್ಪ್ರೀ ಕೂಟದ ವೀಕ್ಷಕ ವಿವರಣೆ ಮಾಡುತ್ತಿದ್ದ ಚೆಸ್ ಗ್ರ್ಯಾನ್ಮಾಸ್ಟರ್ ಇಲ್ಯಾ ಸ್ಮಿರಿನ್ ವಿರುದ್ದ ಲಿಂಗ ತಾರತಮ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸ್ಥಾನದಿಂದ ಹೊರ ಹಾಕಲಾಗಿದೆ.
ಫಿಡೆ ಆಯೋಜಿಸಿರುವ ಮೊದಲು ಮಹಿಳಾ ಕೂಟ ಇದಾಗಿದೆ. ಮೊದಲ ಕೂಟದಲ್ಲಿಯೇ ವಿವಾದ ಎಬ್ಬಿದ್ದು, ಚೆಸ್ ಗ್ರ್ಯಾನ್ಮಾಸ್ಟರ್ ಇಲ್ಯಾ ಸ್ಮಿರಿನ್ ಲಿಂಗ ತಾರತಮ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ. ಆರೋಪವನ್ನು ಲಘುವಾಗಿ ಪರಿಗಣಿಸಿದ್ದ ಫಿಡೆ, ಕೆಲವು ಆಟಗಾರರು ವಾಗ್ವಾದ ನಡೆಸಿದ ಹಿನ್ನೆಲೆಯ್ಲಲಿ ಇಲ್ಯಾರನ್ನು ವೀಕ್ಷಕ ವಿವರಣೆ ನೀಡುವ ಸ್ಥಾನದಿಂದ ಹೊರ ಹಾಕಿತು.
ಇಬ್ಬರು ಆಟಗಾರ್ತಿಯರ ನಡುವೆ 9ನೇ ಸುತ್ತಿನ ಪಂದ್ಯ ನಡೆಯುತ್ತಿದ್ದ ವೇಳೆ ಬೆಲಾರಸ್ ಗ್ರ್ಯಾನ್ಮಾಸ್ಟರ್ ಸ್ಮಿರಿನ್, ಮಹಿಳೆ ವಿಮ್ ಫಿಯೋನಾ ಸ್ಟೀಲ್ ಆಯಂಟೋನಿ ವೀಕ್ಷಕ ವಿವರಣೆ ನೀಡುತ್ತಿದ್ದರು. ಈ ವೇಳೆ ಅಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದವರೊಬ್ಬರು, ಮಹಿಳೆಯರ ಪಂದ್ಯದಲ್ಲಿ ಗ್ರ್ಯಾನ್ಮಾಸ್ಟರ್ ಅರ್ಹತೆ ಪಡೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಿರಿನ್, ಚೆಸ್ ಮಹಿಳೆಯರಿಗಿರುವ ಆಟವಲ್ಲ, ಅವರೇಕೆ ಪುರುಷರೆದುರು ಆಡಬೇಕು ಎಂದು ಮರು ಪ್ರಶ್ನೆ ಹಾಕಿದರು. ಅಲ್ಲದೆ ಜಿಎಂ ಪಟ್ಟ ಪಡೆಯಲು ಮಹಿಳೆಯರು ಏಕೆ ಪ್ರಯತ್ನಿಸಬೇಕು? ಎಲ್ಲವನ್ನೂ ಸಮಾನತೆ ಹೆಸರಿನಲ್ಲೇ ನೋಡುವುದು ಸರಿಯಲ್ಲ ಎಂದರು. ಇದರಿಂದ ಕೆರಳಿದ ಆಟಗಾರ್ತಿಯರು ಫಿಡೆಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.