ಗುವಾಹಟಿ, ಅ 03 (DaijiworldNews/MS): ಕ್ರಿಕೆಟ್ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳು ಮೈದಾನಕ್ಕೆ ಪ್ರವೇಶಿಸಿದ ಘಟನೆಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಕೆಲವೊಮ್ಮೆ ನಾಯಿ, ಬೆಕ್ಕು -ಪಕ್ಷಿಗಳಿಂದ ಕೆಲ ಕಾಲ ಆಟ ನಿಲ್ಲುವುದನ್ನು ನಾವು ನೋಡಿದ್ದೇವೆ.
ಆದರೆ ಗುವಾಹಟಿಯಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ಸಂದರ್ಭ , ಟೀಂ ಇಂಡಿಯಾದ ಇನ್ನಿಂಗ್ಸ್ ವೇಳೆ ಹಾವೊಂದು ವಿಚಿತ್ರವಾಗಿ ಅಡ್ಡಿಪಡಿಸಿತು.
ಭಾರತೀಯ ಇನ್ನಿಂಗ್ಸ್ನ ಏಳು ಓವರ್ಗಳ ಕೊನೆಯಲ್ಲಿ ಫೀಲ್ಡರ್ಗಳ ಫೀಲ್ಡ್ ಪ್ಲೇಸ್ಮೆಂಟ್ ಅನ್ನು ಕ್ರಿಕೆಟಿಗರು ಬದಲಾಯಿಸಿದಾಗ ಮೈದಾನದ ಮಧ್ಯದ ಕಡೆಗೆ ಹೋಗುತ್ತಿದ್ದಾಗ ಹಾವೊಂದು ಮೈದಾನಕ್ಕೆ ನುಸುಳಿದೆ.
ಮೈದಾನದಲ್ಲಿ ಹಾವು ಹರಿದಾಡುತ್ತಿರುವುದನ್ನು ಕಂಡ ಕ್ರಿಕೆಟ್ ಆಟಗಾರರು ಕೂಡಲೇ ಮಾಹಿತಿ ನೀಡಿದ್ದಾರೆ. ತಕ್ಷಣ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಧಾವಿಸಿ ಸರೀಸೃಪವನ್ನು ಹಿಡಿದಿದ್ದಾರೆ. ಈ ರೀತಿಯ ಪರಿಸ್ಥಿತಿ ಸಂಭವಿಸಬಹುದು ಮೊದಲೇ ಊಹಿಸದಂತೆ ಸಿಬ್ಬಂದಿಯ ಸನ್ನದ್ಧತೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಹಾವನ್ನು ಮೈದಾನದಿಂದ ಸಂರಕ್ಷಿಸಿದ ಬಳಿಕ ನಿಟ್ಟುಸಿರು ಬಿಟ್ಟ ಉಭಯ ತಂಡಗಳು ಆಟವನ್ನು ಮುಂದುವರೆಸಿದವು.