ನವದೆಹಲಿ, ಅ 03 (DaijiworldNews/DB): ಭಾರತದ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ನಾಲ್ಕು ವರ್ಷಗಳ ಕಾಲ ಅಮಾನತು ಮಾಡಿ ಆದೇಶಿಸಿದೆ. ಡೋಪಿಂಗ್ ಟೆಸ್ಟ್ನಲ್ಲಿ ನಿಷೇಧಿತ ಮೆಟಾಂಡಿಯೊನೊನ್ ಸೇವನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಉತ್ತರ ಪ್ರದೇಶ ಮೂಲದ 27 ಶಿವಪಾಲ್ ಸಿಂಗ್ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ವೇಳೆ ಡೋಪಿಂಗ್ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರು ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಅಲ್ಲದೆ ನಿಷೇಧಿತ ಮೆಟಾಂಡಿಯೊನೊನ್ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ಕಳೆದ ಅಕ್ಟೋಬರ್ 21ರಿಂದಲೇ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಅನರ್ಹತೆ ಅವಧಿಯನ್ನು 2025ರ ಅಕ್ಟೋಬರ್ ತನಕ ವಿಸ್ತರಿಸಿ ಘಟಕವು ಆದೇಶ ಹೊರಡಿಸಿದೆ. ನಾಲ್ಕು ವರ್ಷಗಳ ಅಮಾನತು ಆದೇಶವನ್ನು ಡೋಪಿಂಗ್ ಶಿಸ್ತಿನ ಸಮಿತಿ ಆಗಸ್ಟ್ನಲ್ಲೇ ನಿರ್ಧರಿಸಿತ್ತಾದರೂ, ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ ವೆಬ್ಸೈಟ್ನಲ್ಲಿ ತಡವಾಗಿ ಅಪ್ಲೋಡ್ ಮಾಡಲಾಗಿದೆ.
2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 86.23 ಮೀ ಜಾವೆಲಿನ್ ಎಸೆದು ಶಿವಪಾಲ್ ಬೆಳ್ಳಿ ಗೆದ್ದಿದ್ದರು.