ನವದೆಹಲಿ, ಅ 03 (DaijiworldNews/SM): ಟಿ20 ವಿಶ್ವಕಪ್ನಿಂದ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಔಟಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ತಂಡದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.
ಬೆನ್ನುನೋವಿಗೆ ಸಿಲುಕಿರುವ ಜಸ್ಪ್ರೀತ್ ಬುಮ್ರಾ ಹೊರಬಿದ್ದಿರುವುದನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿತು. ಶೀಘ್ರದಲ್ಲೇ ಬದಲಿ ಆಟಗಾರರನ್ನು ಹೆಸರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಬುಮ್ರಾ ಬೆನ್ನುನೋವಿಗೆ ಕನಿಷ್ಠ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ಮಂಡಳಿ ಮೂಲಗಳು ಹೇಳಿದ್ದವು. ಆಗಲೇ ಅವರು ವಿಶ್ವಕಪ್ನಿಂದ ಬೇರ್ಪಡುವುದು ಖಚಿತವಾಗಿತ್ತು. ಇದೀಗ ಅಧಿಕೃತಗೊಂಡಿದೆ.
ಸದ್ಯ ಬುಮ್ರಾ ಬೆಂಗಳೂರಿನ ಎನ್ಸಿಎಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.