ಲಕ್ನೋ, ಅ 06 (DaijiworldNews/SM): ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa) ನಡುವೆ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 9 ರನ್ಗಳಿಂದ ಸೋಲನುಭವಿಸಿದೆ.
ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗದ ಕಾರಣ ಎರಡೂ ಇನಿಂಗ್ಸ್ಗಳಿಂದ ಪಂದ್ಯದ ತಲಾ 10 ಓವರ್ಗಳನ್ನು ಕಡಿತಗೊಳಿಸಲಾಯಿತು. ಹೀಗಾಗಿ 40 ಓವರ್ಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಆರಂಭಿಕ ವೈಫಲ್ಯದ ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್ ಮತ್ತು ಮಿಲ್ಲರ್ ಅವರ ಬೃಹತ್ ಜೊತೆಯಾಟದಿಂದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಆರಂಭಿಕರ ವೈಫಲ್ಯದ ಜೊತೆಗೆ ರುತುರಾಜ್ ಹಾಗೂ ಇಶಾನ್ ಕಿಶನ್ ನಿದಾನಗತಿಯ ಬ್ಯಾಟಿಂಗ್, ಟೀಂ ಇಂಡಿಯಾವನ್ನು ಸೋಲಿನ ದವಡೆಗೆ ಸಿಲುಕಿಸಿತು.
ಸಂಜು ಸ್ಯಾಮ್ಸನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ನಿರಾಸೆಯನ್ನು ಬದಿಗಿಟ್ಟ ಸ್ಯಾಮ್ಸನ್ (ಅಜೇಯ 86) ಲಕ್ನೋದಲ್ಲಿ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ, ಕಳಪೆ ಫೀಲ್ಡಿಂಗ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಹರಿಣಗಳು ನೀಡಿದ ಟಾರ್ಗೆಟ್ ತಲುಪಲು ಸಾಧ್ಯವಾಗಲಿಲ್ಲ.
ದಕ್ಷಿಣ ಆಫ್ರಿಕಾದ ಬಲಿಷ್ಠ ಮತ್ತು ಅನುಭವಿ ಬೌಲಿಂಗ್ ಮುಂದೆ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ನಾಯಕ ಶಿಖರ್ ಧವನ್ ರೂಪದಲ್ಲಿ ಒಬ್ಬ ಅನುಭವಿ ಬ್ಯಾಟ್ಸ್ಮನ್ ಮಾತ್ರ ಇದ್ದರು. ಅವರನ್ನು ಹೊರತುಪಡಿಸಿ ಶುಭಮನ್ ಗಿಲ್, ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಅಗ್ರ 4 ರಲ್ಲಿದ್ದರು. ಆದರೆ, ಈ ನಾಲ್ವರಲ್ಲಿ ಯಾರಿಗೂ ಕೂಡ ಒಂದು ಒಳ್ಳೇಯ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಗಿಲ್ ಮತ್ತು ಧವನ್ ಕೇವಲ 6 ಓವರ್ಗಳಲ್ಲಿ 8 ರನ್ಗಳಿಗೆ ಔಟಾದರು. ಅದೇ ಸಮಯದಲ್ಲಿ, ಇಶಾನ್ ಮತ್ತು ಗಾಯಕ್ವಾಡ್ 40 ರನ್ ಜೊತೆಯಾಟವನ್ನು ಹಂಚಿಕೊಂಡರು, ಆದರೆ ಇದಕ್ಕಾಗಿ 11 ಓವರ್ಗಳಿಗಿಂತ ಹೆಚ್ಚು ಎಸೆತಗಳನ್ನು ಆಡಿದರು.
ಒಂದು ಹಂತಕ್ಕೆ ಭಾರತ 51 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಅನುಭವಿ ಜೋಡಿಯಾದ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಮೈದಾನಕ್ಕಿಳಿದಿದ್ದರು. ಅಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧ ದಾಳಿ ನಡೆಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು 100 ರ ಗಡಿ ದಾಟಿಸಿದರು. ಆದರೆ 118 ರನ್ ಗಳಿಸುವಷ್ಟರಲ್ಲಿ ಅವರ ವಿಕೆಟ್ ಪತನವಾಗುವುದರೊಂದಿಗೆ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಂತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಸ್ಯಾಮ್ಸನ್ ಆಕ್ರಮಣಕಾರಿ ಶೈಲಿಯನ್ನು ಬಿಟ್ಟು ಇನ್ನಿಂಗ್ಸ್ ಅನ್ನು ಕೊನೆಯ ಓವರ್ಗೆ ಕೊಂಡೊಯ್ಯಲು ಪ್ರಯತ್ನಿಸಿದರು.