ರಾಂಚಿ, ಅ 09 (DaijiworldNews/DB): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟ್ಆರ ಡೇವಿಡ್ ಮಿಲ್ಲರ್ ಅವರ ಪುಟ್ಟ ಅಭಿಮಾನಿಯೊಬ್ಬಳು ಅಕಾಲಿಕವಾಗಿ ಸಾವನ್ನಪ್ಪಿರುವುದಕ್ಕೆ ಡೇವಿಡ್ ಮಿಲ್ಲರ್ ಕಣ್ಣೀರಾಗಿದ್ದಾರೆ. ಆಕೆಯೊಂದಿಗಿನ ರೀಲ್ಸ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಏಕದಿನ ಸರಣಿಯಲ್ಲಿ ಆಡಲು ಸದ್ಯ ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ ಬೀಡುಬಿಟ್ಟಿದೆ. ಇಂದು ರಾಂಚಿಯಲ್ಲಿ ಎರಡನೇ ಪಂದ್ಯದಲ್ಲಿ ಸೆಣಸಾಡಲಿದೆ. ಈ ನಡುವೆ ಆ ತಂಡದ ಆಟಗಾರ ಡೇವಿಡ್ ಮಿಲ್ಲರ್ ಅವರು ತಮ್ಮ ಬಾಲಾಭಿಮಾನಿಯನ್ನು ಕಳೆದುಕೊಂಡ ಕಹಿ ಸತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಸ್ಕಟ್ನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ವಿಶಾಲ ಹೃದಯ ಹೊಂದಿದ್ದ ನಿಮ್ಮ ಹೋರಾಟ ದೊಡ್ಡದು. ಧನಾತ್ಮಕತೆ ಸದಾ ನಿಮ್ಮಲ್ಲಿತ್ತು. ಮುಖದ ಮೇಲಿನ ನಗು, ಕಿಡಿಗೇಡಿತನ, ಅಷ್ಟೇ ಪ್ರೀತಿ..ನಿಮ್ಮ ಪ್ರಯಾಣದಲ್ಲಿ ಪ್ರತಿ ಸವಾಲನ್ನು ಸ್ವೀಕರಿಸಿ ಬಂದಿದ್ದೀರಿ. ಜೀವನದ ಪ್ರತಿ ಕ್ಷಣವನ್ನು ಆನಂದಿಸುವುದು ಹೇಗೆಂಬುದನ್ನು ನಮಗೆ ಕಲಿಸಿಕೊಟ್ಟಿದ್ದೀರಿ. ಐ ಲವ್ ಯು ಸೋ ಮಚ್, ಆರ್ ಐಪಿ' ಎಂದು ಬರೆದುಕೊಂಡಿದ್ದರು. ಅವಳೊಂದಿಗಿನಇನ್ಸ್ಟಾಗ್ರಾಮ್ ರೀಲ್ ಅಪ್ಲೋಡ್ ಮಾಡಿ 'ಆರ್ ಐಪಿ ಯೂ ಲಿಟಲ್ ರಾಕ್ಸ್ಟಾರ್. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಮಿಲ್ಲರ್ ಮಗಳೆಂಬ ತಪ್ಪು ಸಂದೇಶ
ಮಿಲ್ಲರ್ ಅವರ ಈ ಭಾವುಕ ಪೋಸ್ಟ್ ಮಾಡಿದ ಅಭಿಮಾನಿಗಳು ಅಕಾಲಿಕವಾಗಿ ಮರಣಕ್ಕೀಡಾಗಿರುವ ಬಾಲಕಿ ಮಿಲ್ಲರ್ ಅವರ ಪುತ್ರಿ ಎಂದೇ ಭಾವಿಸಿದ್ದರು. ಅಲ್ಲದೆ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಿ ಮಾಹಿತಿ ಹಂಚಲಾಗಿತ್ತು. ಆದರೆ ಆಕೆ ಮಿಲ್ಲರ್ ಮಗಳಲ್ಲ, ಬದಲಾಗಿ ಅವರ ಅಭಿಮಾನಿಯಾಗಿದ್ದಳು. ಕ್ಯಾನ್ಸರ್ನಿಂದ ಹೋರಾಡುತ್ತಿದ್ದ ಆಕೆ ಸಾವನ್ನಪ್ಪಿದ್ದಾಳೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.