ನವದೆಹಲಿ, ಅ 10 (DaijiworldNews/DB): ಫುಟ್ಬಾಲ್ ಮತ್ತು ಹಾಕಿ ಸಂಸ್ಥೆಗಳಿಗೆ ಮಾಜಿ ಆಟಗಾರರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಇದೀಗ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ಗೆ ಪ್ರಧಾನ ಕಾರ್ಯದರ್ಶಿ ಬದಲು ಸಿಇಒ ನೇಮಕ ಮಾಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೂಚನೆ ನೀಡಿದೆ.
ಭಾರತೀಯ ಕ್ರೀಡಾ ಸಂಸ್ಥೆಗಳಲ್ಲಿ ಇತ್ತೀಚೆಗೆ ಹಲವು ಧನಾತ್ಮಕ ಬದಲಾವಣೆಗಳಾಗುತ್ತಿವೆ. ಅದರಂತೆ ನೇಮಕ ವಿಚಾರದಲ್ಲಿಯೂ ಅಂತಹ ಬದಲಾವಣೆ ಗೋಚರಿಸುತ್ತಿದೆ. ಡಿಸೆಂಬರ್ 5ರಿಂದ 7ರ ನಡುವೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ಗೆ ಚುನಾವಣೆ ನಡೆಯಲಿದೆ. ಅದರ ಬಳಿಕ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡುವ ಬದಲು ಸಿಇಒ ನೇಮಕ ಮಾಡಲು ಸೂಚಿಸಲಾಗಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಶನ್ಗೆ ಪ್ರಧಾನ ಕಾರ್ಯದರ್ಶಿ ಬದಲು ಸಿಇಒ ಆಯ್ಕೆಯಾದರೆ ದೇಶದ ಎಲ್ಲಾ ಅಸೋಸಿಯೇಶನ್ಗಳಲ್ಲಿಯೂ ಇಂತಹ ಬದಲಾವಣೆ ಮುಂಬರುವ ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.