ನವದೆಹಲಿ, ಅ 18 (DaijiworldNews/DB): ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ 5ನೇ ಓವರ್ನ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕೆ.ಎಲ್. ರಾಹುಲ್ ಎಂ.ಎಸ್. ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯೋಗಿಸಿದ ಅಮೋಘ ಪ್ರದರ್ಶನ ನೀಡಿದರು. ಧೋನಿಯ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಬಾರಿಸಿದ ರಾಹುಲ್ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸದ್ಯ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಬ್ಯುಸಿಯಲ್ಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ಪ್ರಸ್ತುತ ನಡೆಯುತ್ತಿದ್ದು ,ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿರುವ ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಮೊದಲ ಅಧಿಕೃತ ವಾರ್ಮ್-ಅಪ್ ಮ್ಯಾಚ್ನಲ್ಲಿ ಸೋಮವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಸೆಣಸಾಟ ನಡೆದಿದ್ದು, ಟೀಮ್ ಇಂಡಿಯಾ 6 ರನ್ಗಳಿಂದ ಗೆದ್ದು ಬೀಗಿತು. ಟೀಂ ಇಂಡಿಯಾಕ್ಕೆ ಸ್ಪೋಟಕ ಆರಂಭ ನೀಡಿದ ಕೆ.ಎಲ್. ರಾಹುಲ್, ಕೇವಲ 33 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಸಿಡಿಸಿ 57 ರನ್ ಕಲೆ ಹಾಕಿದರು.
5ನೇ ಓವರ್ನ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ರಾಹುಲ್ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರಯೋಗಿಸಿ ಚೆಂಡನ್ನು ಸಿಕ್ಸರ್ಗೆ ಹಾಕಿ ನೆರೆದವರ ಹುಬ್ಬೇರಿಸುಂತೆ ಮಾಡಿದರು. ರಾಹುಲ್ ಅವರ ಈ ಅಮೋಘ ಪ್ರದರ್ಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.