ಮೆಲ್ಬೋರ್ನ್, ಅ 28 (DaijiworldNews/DB): ಟಿ 20 ವಿಶ್ವಕಪ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿರುವ ಪಾಕಿಸ್ತಾನಕ್ಕೆ ಸೆಮೀಸ್ಗೇರುವ ಅವಕಾಶ ಇನ್ನೂ ಇದೆ. ಏಕೆಂದರೆ ಇನ್ನೂ ಮೂರು ಪಂದ್ಯಗಳಲ್ಲಿ ಆಡಲು ಬಾಕಿ ಇದ್ದು, ಇದರಲ್ಲಿ ಮೂರನ್ನೂ ಗೆದ್ದರೆ ಸೆಮೀಸ್ನಲ್ಲಿ ಅವಕಾಶ ಪಡೆದುಕೊಳ್ಳಬಹುದು.
ಈ ಬಾರಿಯ ಟಿ 20 ವಿಶ್ವಕಪ್ನಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಅದರಲ್ಲೂ ಆಡಿದ ಎರಡೂ ಪಂದ್ಯಗಳಲ್ಲಿಯೂ ಪಾಕ್ ತಂಡವು ಸೋಲಿಗೆ ಶರಣಾಗಿತ್ತು. ಭಾರತ ಮತ್ತು ಜಿಂಬಾಬ್ವೆ ವಿರುದ್ದ ಸೋಲುಂಡಿದ್ದ ಬಾಬರ್ ಪಡೆ ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಸೆಮೀಸ್ ಹಾದಿ ಕಠಿಣವೆಂದೇ ಈ ಸೋಲಿನ ಬಳಿಕ ಹೇಳಲಾಗಿತ್ತಾದರೂ, ಇನ್ನೂ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ತಂಡಕ್ಕೆ ಆಡುವ ಅವಕಾಶವಿದ್ದು, ಮೂರರಲ್ಲಿಯೂ ಗೆಲುವು ಸಾಧಿಸಿದರಷ್ಟೇ ಆ ತಂಡಕ್ಕೆ ಸೆಮೀಸ್ಗೆ ಹೋಗುವ ಅವಕಾಶ ಲಭ್ಯವಾಗಲಿದೆ.
ಮುಂದೆ ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ಪಾಕ್ ತಂಡ ಆಡಬೇಕಿದೆ. ಮೂರರಲ್ಲೂ ಭಾರೀ ಅಂತರದಿಂದ ಗೆದ್ದು, ನೆಟ್ ರನ್ ರೇಟ್ ಸುಧಾರಿಸಿದಲ್ಲಿ ಆ ತಂಡ ಸೆಮೀಸ್ಗೆ ಹೋಗಬಹುದು.