ನವದೆಹಲಿ, ನ 07(DaijiworldNews/MS): ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಅವರಿಬ್ಬರು ಶೀಘ್ರ ವಿಚ್ಚೇಧನ ಪಡೆಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನ ಮಾಧ್ಯಮವೊಂದು ಟೆಲಿವಿಷನ್ ಶೋನಲ್ಲಿ, ಶೋಯೆಬ್ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಅಲ್ಲದೆ ಸಾನಿಯಾ ಜೊತೆಗಿನ ಸಂಬಂಧ ಮುರಿದು ಬೀಳುವ ಹಂತದಲ್ಲಿದೆ ಅಂತಲೂ ವರದಿ ನೀಡಿದೆ.
ಈ ಮಧ್ಯೆ ಸಾನಿಯಾ ಮಿರ್ಜಾ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಒಂದು ಪೋಸ್ಟ್ ಈ ಸುದ್ದಿಗೆ ಇನ್ನಷ್ಟು ಬಲ ನೀಡುತ್ತಿವೆ.
ಸಾನಿಯಾ ಇತ್ತೀಚೆಗೆ ತನ್ನ ಮಗ ಇಜಾನ್ ಮಲಿಕ್ ಮಿರ್ಜಾ ಜೊತೆಗಿರುವ ಪೋಸ್ಟ್ ಹಂಚಿಕೊಂಡಿದ್ದು ಅದರಲ್ಲಿ- " ಜೀವನದ ಕಷ್ಟದ ಸಂದರ್ಭದಲ್ಲಿ, ನನಗಾಗಿ ಇರುವ ಕ್ಷಣಗಳು" ಬರೆದಿದ್ದಾರೆ.