ಮೆಲ್ಬರ್ನ್, ನ 12 (DaijiworldNews/DB): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಮತ್ತೊಮ್ಮೆ ಗ್ರೆಗ್ ಬಾರ್ಕ್ಲೇ ಅವರು ಆಯ್ಕೆಯಾಗಿದ್ದಾರೆ. ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾದರು.
ಮೆಲ್ಬೋರ್ನ್ನಲ್ಲಿ ಶನಿವಾರ ಐಸಿಸಿ ಮಂಡಳಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಾರ್ಕ್ಲೇ ಅವರನ್ನು ಆಯ್ಕೆ ಮಾಡಲಾಯಿತು. ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಡಾ. ತವೆಂಗ್ವಾ ಮುಕುಹ್ಲಾನಿ ಅವರೂ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅವಿರೋಧವಾಗಿ ಬಾರ್ಕ್ಲೇ ಆಯ್ಕೆಯಾದರು. ನ್ಯೂಜಿಲೆಂಡ್ ಕ್ರಿಕೆಟ್ ನ ಮಾಜಿ ಮುಖ್ಯಸ್ಥ ಬಾರ್ಕ್ಲೇ ಅವರು ಎರಡನೇ ಅವಧಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಮುನ್ನಡೆಸಲಿದ್ದಾರೆ. ಮುಂದಿನ ಎರಡು ವರ್ಷ ಕಾಲ ಅವರಿಗೆ ಜವಾಬ್ದಾರಿ ಇರುತ್ತದೆ. ಈಗ ತನ್ನ ಎರಡನೇ ಅವಧಿಯನ್ನು ಇನ್ನೂ ಎರಡು ವರ್ಷಗಳ ಕಾಲ ನಿರ್ವಹಿಸಲಿದ್ದಾರೆ.
ಐಸಿಸಿಯಲ್ಲಿ 17 ಸದಸ್ಯರಿದ್ದು, ಈ ಪೈಕಿ 12 ಮಂದಿ ನಿರ್ದೇಶಕರ ಬೆಂಬಲವನ್ನು ಬಾರ್ಕ್ಲೇ ಹೊಂದಿದ್ದರು. ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಸದಸ್ಯರಾಗಿದ್ದು, ಜಯ್ ಶಾ ಬಾರ್ಕ್ಲೇ ಅವರನ್ನು ಬೆಂಬಲಿಸಿದ್ದರು.