ಹ್ಯಾಂಗ್ ಝೂ, ಸೆ 27 (DaijiworldNews/MS): ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಈಗಾಗಲೇ 3 ಚಿನ್ನದ ಪದಕಗಳನ್ನು ಗೆದ್ದಿರುವ ಭಾರತ, ಈಗ ತನ್ನ ಖಾತೆಗೆ ಮತ್ತೊಂದನ್ನು ಸೇರಿಸಿಕೊಂಡಿದೆ.
ಮಹಿಳೆಯರ ಶೂಟಿಂಗ್ 25 ಪಿಸ್ತೂಲ್ ಸ್ಪರ್ಧೆಯಲ್ಲಿ ಮನುಬಾಕರ್, ಇಶಾ ಸಿಂಗ್
ಮತ್ತು ರಿಥಮ್ ಸಾಂಗ್ವಾನ್ ಚಿನ್ನದ ಜೋಡಿಯು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮನು, ಈಶಾ ಮತ್ತು ರಿದಮ್ ಒಟ್ಟು 1759 ಅಂಕಗಳನ್ನು ಪಡೆಯುವ ಮೂಲಕ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟರು.
ಚೀನಿಯರು 1756 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಪಡೆದರೆ ದಕ್ಷಿಣ ಕೊರಿಯಾದ ಶೂಟರ್ಗಳು ಒಟ್ಟು 1742 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಈಏಷ್ಯನ್ ಗೇಮ್ಸ್ನಲ್ಲಿ ಭಾರತ 4 ಚಿನ್ನದ ಪದಕ ಸೇರಿದಂತೆ 16 ಪದಕಗಳನ್ನು ಗೆದ್ದಿದೆ.