ಮುಂಬೈ, ನ.22(DaijiworldNews/AK): ಭಾರತ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ಟಾಲಿವುಡ್ಗೆ ನಾಯಕಿಯಾಗಿ ಎಂಟ್ರಿಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಉತ್ತಮ ಡ್ಯಾನ್ಸರ್ ಆಗಿರುವ ಧನಶ್ರೀ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಇದೀಗ ಯಜುವೇಂದ್ರ ಚಾಹಲ್ ಪತ್ನಿಗೆ ತೆಲುಗು ಸಿನಿಮಾರಂಗದಿಂದ ಅಫರ್ ಬಂದಿದೆ ಎನ್ನಲಾಗಿದೆ.
ನೃತ್ಯ ಆಧರಿಸಿ ಕತೆಯುಳ್ಳ ‘ಆಕಾಶಂ ಧಾಟಿ ವಸ್ತಾವ ಎಂಬ ಸಿನಿಮಾದಲ್ಲಿ ಧನಶ್ರೀ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರಂತೆ. ಡ್ಯಾನ್ಸ್ ಮಾಸ್ಟರ್ ಯಶ್ ಈ ಚಿತ್ರದ ನಾಯಕನಾಗಿದ್ದಾರೆ. ಚಿತ್ರಕ್ಕೆ ಶಶಿಕುಮಾರ್ ಮುತ್ತುಲೂರಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಧನಶ್ರೀ ಭಾಗದ ಕೆಲವು ದೃಶ್ಯಗಳ ಶೂಟಿಂಗ್ ಕೂಡ ನಡೆದಿದೆ ಎನ್ನಲಾಗಿದೆ.