ಮುಂಬೈ ,ನ.24(DaijiworldNews/AK): ರೆಹಮಾನ್ ಅವರು ಅತ್ಯಂತ ವಿಶ್ವಾಸ ಇಡುವ ಅದ್ಭುತ ವ್ಯಕ್ತಿ. ನನ್ನ ಜೀವನದಲ್ಲಿ ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅವರನ್ನು ಮಾತ್ರ ಎಂದು ಅವರ ವಿಚ್ಛೇದಿತ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.
ನವೆಂಬರ್ 19ರಂದು ಸಂಗೀತ ನಿರ್ದೇ ಶಕ ಎ.ಆರ್. ರೆಹಮಾನ್ ಹಾಗೂ ಸಾಯಿರಾ ಬಾನು ಅವರು 29 ವರ್ಷ ಗಳ ವೈವಾಹಿಕ ಬದುಕಿಗೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದರು. ಆದರೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಒಂದನ್ನು ರೆಹಮಾನ್ ಪತ್ನಿ ಸಾಯಿರಾ ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ’ಇನ್ನೂ ಯಾವುದೂ ಅಧಿಕೃತವಲ್” ಎಂದು ಬರೆದುಕೊಂಡಿದ್ದಾರೆ.
ನಾನು ಚಿಕಿತ್ಸೆಗಾಗಿ ಚೆನ್ನೈನಿಂದ ಹೋಗುತ್ತಿದ್ದೇನೆ. ಆರೋ ಗ್ಯದ ಕಾರಣಗಳಿಂದ ರೆಹಮಾನ್ ಅವರಿಂದ ತುಸು ವಿರಾಮ ತೆಗೆದುಕೊಂಡಿದ್ದೇನೆ. ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ ಬಳಿಕ ಎಲ್ಲಾ ವಿಷಯಗಳನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಮತ್ತು ತಮ್ಮ ಕುಟುಂಬದವರನ್ನು ಗುರಿಯಾಗಿಸಿಕೊಂಡು ಮಾನನಷ್ಟ ಮತ್ತು ಆಕ್ಷೇಪಾರ್ಹ ವಿಚಾರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಾಗಿ ಎ.ಆರ್. ರೆಹಮಾನ್ ಅವರು ಎಕ್ಸ್’ನಲ್ಲಿ ಪೋಸ್ಟ್ ಒಂದನ್ನು ಶನಿವಾರ ಹಂಚಿಕೊಂಡಿದ್ದರು.
ಅಲ್ಲದೇ ಇತ್ತಿಚೆಗೆ ರೆಹಮಾನ್, ಸಾಯಿರಾ ಬಾನು ದಂಪತಿ ವಿಚ್ಛೇದನದ ಸಂಗತಿಯನ್ನು ಜಂಟಿ ಪತ್ರಿಕಾ ಹೇಳಿಕೆಯಿಂದ ಸ್ಪಷ್ಟಪಡಿಸಿದ್ದರು. ಸಂಬಂಧದಲ್ಲಿ ಭಾವುಕ ನೆಲೆಗಟ್ಟಿನಲ್ಲಿ ಒತ್ತಡ ಉಂಟಾಗಿದ್ದರಿಂದ ಬೇರೆಯಾಗಲು ನಿರ್ಧ ರಿಸಿದರು ಎಂದು ಅವರ ವಕೀಲೆ ತಿಳಿಸಿದ್ದರು.