ಮುಂಬೈ, ನ.25(DaijiworldNews/AA): ನಟಿ ತಮನ್ನಾ ಭಾಟಿಯಾ ಅವರು ಬಾಲಿವುಡ್ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ನಟಿ ತಮನ್ನಾ ಅವರು ತಮ್ಮ ಭಾವಿ ಪತಿಯೊಂದಿಗೆ ಹೊಸ ಮನೆಯನ್ನು ಹುಡುಕಾಟ ನಡೆಸುತ್ತಿದ್ದಾರೆ.
2025ರ ಆರಂಭದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಮದುವೆಯಾಗಲಿದ್ದು, ಈಗಾಗಲೇ ಮದುವೆಗೆ ಸಜ್ಜಾಗುತ್ತಿದ್ದಾರೆ. ಮದುವೆಗಾಗಿ ಅವರು ಶಾಪಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಜೊತೆಗೆ ಮುಂಬೈನಲ್ಲಿ ಅವರು ಹೊಸ ಮನೆಯ ಹುಡುಕಾಟ ನಡೆಸುತ್ತಿದ್ದಾರೆ. ಹಾಗೂ ಮನೆಗೆ ಬೇಕಾದ ವಸ್ತುಗಳನ್ನೆಲ್ಲಾ ಖರೀದಿ ಮಾಡುತ್ತಿದ್ದಾರೆ ಮದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ತಮನ್ನಾ ಅವರು ಎಲ್ಲಿಯೂ ಹೇಳಿಕೆ ನೀಡಿಲ್ಲ.
ನಟಿ ತಮನ್ನಾ ಅವರಿಗೆ ಚಿತ್ರರಂಗದಲ್ಲಿ ತುಂಬ ಬೇಡಿಕೆ ಇದೆ. ಇದರ ನಡುವೆಯೂ ಅವರು ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಆದರೆ ಈ ಜೋಡಿ ಮದುವೆ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೆ ನೀಡಿಲ್ಲವಾದರು, ಇವರಿಬ್ಬರ ಮದುವೆ ಸುದ್ದಿ ಹೊರಬೀಳಲಿ ಎಂದು ಅಭಿಮಾನಿಗಳು ಕಾದಿದ್ದಾರೆ.