ಬೆಂಗಳೂರು, ಡಿ.03(DaijiworldNews/AA): ಸ್ಯಾಂಡಲ್ವುಡ್ನ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಹಲವು ಭಾಷೆಗಳಿಂದ ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಇದೀಗ ಛತ್ರಪತಿ ಶಿವಾಜಿ ಕತೆಯುಳ್ಳ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯ ಸೂಪರ್ ಹಿಟ್ ನಿರ್ದೇಶಕ ಸಂದೀಪ್ ಸಿಂಗ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಸಿನಿಮಾಕ್ಕೆ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಎಂದು ಹೆಸರಿಡಲಾಗಿದೆ.
ಸದ್ಯ ಛತ್ರಪತಿ ಶಿವಾಜಿ ಲುಕ್ನಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡಿರುವ ಲುಕ್ ರಿವೀಲ್ ಆಗಿದೆ. ಈ ಪೋಸ್ಟರ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಛತ್ರಪತಿ ಶಿವಾಜಿ ಕುರಿತಾದ ಈ ಬಯೋಪಿಕ್ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಚಿತ್ರತಂಡ ತಿಳಿಸಿದೆ.