ಬೆಂಗಳೂರು, ಡಿ.06 (DaijiworldNews/TA):ಉಪೇಂದ್ರ, ರಾಜ್ ಬಿ ಶೆಟ್ಟಿ ಹಾಗು ಶಿವರಾಜ್ ಕುಮಾರ್, ನಟಿಸುತ್ತಿರುವ ‘45’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಜನ್ಯ ಅವರ ಮೊದಲ ನಿರ್ದೇಶನದ ಸಿನಿಮಾ ಕೂಡ ಇದಾಗಿದೆ. ಸಿನಿಮಾವನ್ನು ತಾಂತ್ರಿಕವಾಗಿ ರಿಚ್ ಆಗಿರುವಂತೆ ಜನ್ಯ ಸ್ಕೆಚ್ ಹಾಕಿದ್ದಾರೆ.
ಸಿನಿಮಾದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮುನ್ನವೇ ಕತೆಯನ್ನು ಕಾರ್ಟೂನ್ ರೂಪದಲ್ಲಿ ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದರಂತೆ. ಇದೀಗ ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ರಿಚ್ ಮಾಡಲು ಅರ್ಜುನ್ ಜನ್ಯ ಹಾಲಿವುಡ್ಗೆ ಹಾರಿದ್ದಾರೆ ಎನ್ನಲಾಗಿದೆ.
‘45’ ಸಿನಿಮಾದ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಜಾರಿಯಲ್ಲಿದೆ ಎನ್ನಲಾಗಿದೆ. ಸಿನಿಮಾದ ವಿಎಫ್ಎಕ್ಸ್ ಕೆಲಸವನ್ನು ಹಾಲಿವುಡ್ನ ನುರಿತ ತಜ್ಞರಿಂದ ಮಾಡಿಸಲು ಅರ್ಜುನ್ ಜನ್ಯ ಮುಂದಾಗಿದ್ದಾರೆ.
ಹಾಲಿವುಡ್ನ ಹಲವು ಸಿನಿಮಾಗಳಿಗೆ ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಮಾಡಿರುವ ಮಾರ್ಜ್ ಅನ್ನು ಸಂಪರ್ಕ ಮಾಡಿರುವ ಅರ್ಜುನ್ ಜನ್ಯ ಅವರು ‘45’ ಸಿನಿಮಾದ ವಿಎಫ್ಎಕ್ಸ್ ಕೆಲಸವನ್ನು ಸಂಸ್ಥೆಯ ನುರಿತ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರ ನೇತೃತ್ವದಲ್ಲಿ ಮಾಡಿಸುತ್ತಿದೆ ಎಂದು ಹೇಳಲಾಗಿದೆ.