ಚೆನ್ನೈ, ಡಿ.10(DaijiworldNews/AA): ಸ್ಯಾಂಡಲ್ವುಡ್ನ ಖ್ಯಾತ ನಟಿ ರುಕ್ಮಿಣಿ ವಸಂತ್ ಅವರು ಕಾಲಿವುಡ್ಗೆ ನಟ ವಿಜಯ್ ಸೇತುಪತಿ ಅವರಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಕೆಲ ತಿಂಗಳುಗಳ ಹಿಂದೆಯೇ ರುಕ್ಮಿಣಿ ವಸಂತ್ ಅವರು ವಿಜಯ್ ಸೇತುಪತಿಗೆ ನಾಯಕಿಯಾಗಿ ಆಯ್ಕೆಯಾಗಿರುವುದು ಅನೌನ್ಸ್ ಆಗಿತ್ತು. ಇದೀಗ ರುಕ್ಮಿಣಿ ಹುಟ್ಟುಹಬ್ಬದ ಹಿನ್ನೆಲೆ ಅವರ ಪಾತ್ರದ ಗ್ಲಿಂಪ್ಸ್ ಅನ್ನು 'ಎಸಿಇ' ಚಿತ್ರತಂಡ ಬಿಡುಗಡೆ ಮಾಡಿದೆ.
ವಿಜಯ್ ಸೇತುಪತಿ ಹಾಗೂ ರುಕ್ಮಿಣಿ ವಸಂತ್ ಅವರು ಜೋಡಿಯಾಗಿ 'ಎಸಿಇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ರುಕ್ಕು ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.