ಚೆನ್ನೈ, ಡಿ.11(DaijiworldNews/AA): ತಮಿಳಿನ ಸ್ಟಾರ್ ನಟ ಹಾಲಿವುಡ್ನಲ್ಲಿ ಸ್ಟಾರ್ ನಟರುಗಳೊಟ್ಟಿಗೆ ಈಗಾಗಲೇ ನಟಿಸಿದ್ದಾರೆ. ಹಾಗೂ ಹಾಲಿವುಡ್ನಲ್ಲಿ ಒಂದು ಸೋಲೋ ಹೀರೋ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ. ಇದೀಗ ಮತ್ತೊಮ್ಮೆ ಧನುಶ್ ಹಾಲಿವುಡ್ಗೆ ಹಾರಲಿದ್ದಾರೆ.
ಈ ಬಾರಿ ನಟ ಧನುಶ್ ಖ್ಯಾತ ನಟಿಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. 2019ರಲ್ಲಿ ಬಿಡುಗಡೆ ಆದ 'ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್' ಹೆಸರಿನ ಇಂಗ್ಲೀಷ್ ಸಿನಿಮಾನಲ್ಲಿ ಧನುಶ್ ನಟಿಸಿದ್ದರು. ಅದಾದ ಬಳಿಕ ಹಾಲಿವುಡ್ನ ದೊಡ್ಡ ಸ್ಟಾರ್ ನಟರು ನಟಿಸಿದ್ದ 'ದಿ ಗ್ರೇ ಮ್ಯಾನ್' ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಧನುಶ್ ನಟಿಸಿದ್ದರು. ಇದೀಗ ಮೂರನೇ ಬಾರಿಗೆ ಧನುಶ್ ಅವರು ಹಾಲಿವುಡ್ನ ಸಿನಿಮಾದಲ್ಲಿ ನಟಿಸಲಿದ್ದಾರೆ.
ಧನುಶ್, 'ಸ್ಟ್ರೀಟ್ ಫೈಟರ್' ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಸೋನಿ ನಿರ್ಮಾಣ ಮಾಡಲಿದ್ದು, ಹಾಲಿವುಡ್ನ ಖ್ಯಾತ ನಿರ್ದೇಶಕರೊಬ್ಬರು ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಹಾಲಿವುಡ್ ಖ್ಯಾತ ನಟಿ ಸಿಡ್ನಿ ಸ್ವೀನಿ ನಟಿಸಲಿದ್ದಾರೆ.