ಗೋವಾ, ಡಿ.12(DaijiworldNews/AA): ಬಹುಕಾಲದ ಗೆಳೆಯ ಆಂಟೊನಿ ತಟ್ಟಿಲ್ ಅವರೊಂದಿಗೆ ನಟಿ ಕೀರ್ತಿ ಸುರೇಶ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೋವಾದಲ್ಲಿ ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಅವರ ವಿವಾಹ ನಡೆದಿದೆ. ಆಪ್ತರು ಮತ್ತು ಕುಟುಂಬದವರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಆಂಟೊನಿ ತಟ್ಟಲ್ ಓರ್ವ ಉದ್ಯಮಿಯಾಗಿದ್ದು, ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಪರಸ್ಪರ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಪ್ರೀತಿ ವಿಚಾರ ಬಹಿರಂಗಗೊಂಡಿತ್ತು. ಸದ್ಯ ಕೀರ್ತಿ ಸುರೇಶ್ ಅವರ ಮದುವೆಯ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.