ಚಿಕ್ಕಮಗಳೂರು,ಡಿ.15(DaijiworldNews/TA) : ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ರೋಬೋಟಿಕ್ ಆನೆಯನ್ನ ಕೊಡುಗೆಯಾಗಿ ನೀಡಿದ್ದಾರೆ.
ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿದ್ದಾರೆ. ಈ ರೋಬೋಟಿಕ್ ಆನೆ ಸದಾ ಮಠದ ಆವರಣದಲ್ಲೇ ಇರಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಶಿಲ್ಪಾ ಶೆಟ್ಟಿಯವರು ಮಠಕ್ಕೆ ನಿಜವಾದ ಆನೆಯನ್ನೇ ಕೊಡುಗೆಯಾಗಿ ನೀಡುವವರಿದ್ದರು ಆದರೆ ಕಾನೂನಿನ ತೊಡಕಾಗಬಹುದು ಎಂದು ಕಾಡಿನ ಆನೆಯನ್ನೇ ಹೋಲುವ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ರೋಬೋಟಿಕ್ ಆನೆಯನ್ನು ತಂದಿದ್ದ ಸಿಬ್ಬಂದಿ ಹೇಳಿದ್ದಾರೆ.