ಮುಂಬೈ, ಡಿ.19(DaijiworldNews/AK): ಸೌತ್ ಬ್ಯೂಟಿ ಕೀರ್ತಿ ಸುರೇಶ್ ಮದುವೆಯಾದ ಏಳೇ ದಿನಕ್ಕೆ ಕೆಲಸಕ್ಕೆ ಹಾಜರಾಗಿದ್ದಾರೆ. ಹೌದು ಮದುವೆಯ ನಂತರ ರಿಲೀಸ್ ಆಗಿರುವ ಬಾಲಿವುಡ್ನ ಮೊದಲ ಸಿನಿಮಾದ ಪ್ರಚಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಬಂದ ನಟಿಯ ನಡೆಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ಡಿ.12ರಂದು ನಟಿ ಆಂಟೋನಿ ತಟ್ಟಿಲ್ ಜೊತೆ ಹಸೆಮಣೆ ಏರಿದರು. ಈ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆಗಿನ ‘ಬೇಬಿ ಜಾನ್’ ಚಿತ್ರದ ಪ್ರಮೋಷ್ನ್ ಗಾಗಿ ಕೀರ್ತಿ ಮಾಡ್ರನ್ ಬಟ್ಟೆ ತೊಟ್ಟು ಮಾಂಗಲ್ಯ ಧರಿಸಿ ಬಂದಿರೋದು ಅನೇಕರ ಗಮನ ಸೆಳೆದಿದೆ.ಮಾಂಗಲ್ಯ ಧರಿಸಿದ ಮೇಲೆ ಲಕ್ಷಣವಾಗಿ ಸೀರೆ ಹಾಕಬೋದಿತ್ತು ಎಂದೆಲ್ಲಾ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.