ಮುಂಬೈ, ಜ.25 (DaijiworldNews/AA): ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹೀನಾ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ತಮ್ಮ ಚಕಿತ್ಸೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ನಟಿ ರೋಸ್ಲೀನ್ ಖಾನ್ ಅವರು ಇದೊಂದು ಪಿಆರ್ ಸ್ಟಂಟ್ ಮತ್ತು ಪ್ರಚಾರಕ್ಕಾಗಿ ಎಲ್ಲವನ್ನೂ ಉತ್ಪ್ರೇಕ್ಷಿಸುತ್ತಿದ್ದಾರೆ. ಕ್ಯಾನ್ಸರ್ನ ಗಂಭೀರತೆಯನ್ನು ಅವರು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರೋಸ್ಲಿನ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಸ್ಟೋರಿ ಹಂಚಿಕೊಂಡಿದ್ದು, 'ಕಿಮೋಥೆರಪಿಯಿಂದ ತನ್ನ ಕೂದಲನ್ನು ಕಳೆದುಕೊಳ್ಳುವುದು ಮಹಿಳೆಗೆ ದೊಡ್ಡ ನೋವು. ನೀವು ಈ ವಿಷಯವನ್ನು ಸಾಮಾನ್ಯಗೊಳಿಸಬಹುದೇ? ಮೃಗಾಲಯದಲ್ಲಿರುವ ಸಿಂಹಿಣಿ ಧೈರ್ಯ ತೋರಿಸಬಹುದೇ? ಮೂರನೇ ಹಂತದ ಚಿಕಿತ್ಸೆಯ ಬಗ್ಗೆ ಅವರು ಒಂದೆರಡು ಸಾಲುಗಳನ್ನು ಹೇಳಬಹುದೇ? ಅಥವಾ ಅವರು ಜನಮನದಲ್ಲಿ ಉಳಿಯಲು ಕ್ಯಾನ್ಸರ್ ಅನ್ನು ಬಳಸುತ್ತಿದ್ದಾರೆಹೇ?' ಎಂದು ಪ್ರಶ್ನಿಸಿದ್ದಾರೆ.
'ತಪ್ಪು ವಿಚಾರ ಹರಡಲು ಇದು ಅತ್ಯಂತ ಕರುಣಾಜನಕ ಮತ್ತು ನಾಚಿಕೆಗೇಡಿನ ಕೃತ್ಯವಾಗಿದೆ. ವೈದ್ಯಕೀಯ ತಪ್ಪು ಕಲ್ಪನೆಗಳನ್ನು ಹರಡಲು ಭಾರತದಲ್ಲಿ ಯಾವುದೇ ಶಿಕ್ಷೆಯಿಲ್ಲ ಎಂದು ನಿಮಗೆ ತಿಳಿದಿದೆ. ಸೋನಾಲಿ ಬೇಂದ್ರೆ, ಲೀಸಾ, ಮನೀಶಾ ಕೊಯಿರಾಲಾ ಅವರಂತಹ ಕೆಲವು ಪ್ರಜ್ಞಾವಂತ ನಟಿಯರೂ ಇಷ್ಟು ಕೀಳು ಮಟ್ಟಕ್ಕೆ ಇಳಿದು ಜನರನ್ನು ದಾರಿ ತಪ್ಪಿಸಿಲ್ಲ' ಎಂದಿದ್ದಾರೆ.
ಇಂತಹ ಮಾರಣಾಂತಿಕ ಸವಾಲುಗಳನ್ನು ಎದುರಿಸುತ್ತಿರುವ ಜನರ ಬಗ್ಗೆ ನಿಮಗೆ ಯಾವುದೇ ಸಾಮಾಜಿಕ ಜವಾಬ್ದಾರಿ ಇದೆಯೇ ಅಥವಾ ನಿಮ್ಮ ವಾಣಿಜ್ಯ ಉದ್ದೇಶಗಳಿಗಾಗಿ ಕ್ಯಾನ್ಸರ್ ಅನ್ನು ಬಳಸುತ್ತಿದ್ದೀರಾ? ಅವರು ತಮ್ಮ ಕ್ಯಾನ್ಸರ್ನ ಹಂತದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ೩ನೇ ಹಂತದ ರೋಗಿತ ಒಖಒ ಮತ್ತು ವಿಕಿರಣದ ಬಗ್ಗೆ ಅವರು ಎಂದಾದರೂ ಮಾತನಾಡಿದ್ದಾರೆಯೇ? ಕ್ಯಾನ್ಸರ್ನಿಂದ ಬಳಲುತ್ತಿರುವ ಮತ್ತು ಅದನ್ನು ಪ್ರಚಾರದ ಸ್ಟಂಟ್ಗೆ ಬಳಸುತ್ತಿರುವ ಮಾನಸಿಕ ಅಸ್ವಸ್ಥರಿಗಾಗಿ ಮಾತ್ರ ನಾನು ಪ್ರಾರ್ಥಿಸಬಲ್ಲೆ. ಬನ್ನಿ, ಕ್ಯಾನ್ಸರ್ ಬಂದಿದೆ, ಸುದ್ದಿಯಾಗಿದೆ, ಸುದ್ದಿ ಮಾಡೋಣ' ಎಂದು ಅವರು ತಿಳಿಸಿದ್ದಾರೆ.