ಮಂಗಳೂರು,ಜ.29(DaijiworldNews/AK):ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫ್ಲಿಕ್ಸ್, ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲ್ಮ್ಸ್ ಹರಿಪ್ರಸಾದ್ ರೈ ಸಹಯೋಗದಲ್ಲಿ ಆನಂದ್ ಎನ್ ಕುಂಪಲ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದ "ಮಿಡ್ಲ್ ಕ್ಲಾಸ್ ಫ್ಯಾಮಿಲಿ" ತುಳು ಸಿನಿಮಾ ಜನವರಿ 31 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರ ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದರು.





ಮಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಜನವರಿ 31 ರಂದು ಕರಾವಳಿಯ ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದ್ದು, ಚಿತ್ರ ಈಗಾಗಲೇ ಯುಎಇ ಯಲ್ಲಿ ದಾಖಲೆಯ 16 ಯಶಸ್ವಿ ಪ್ರೀಮಿಯರ್ ಶೋ ಕಂಡಿದೆ. ಈಗಾಗಲೇ ರೋಹನ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ನೇತೃತ್ವದಲ್ಲಿ ೩ ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನಡೆದಿದೆ, ಫೆ. ೦೭ ರಂದು ಯುಎಇಯಲ್ಲಿ, ಫೆ. ೨ ರಂದು ಕೆನಡಾದಲ್ಲೂ ತೆರೆಕಾಣಲಿದೆ ಎಂದವರು ಹೇಳಿದರು.
ಬಳಿಕ ರೋಹನ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಮಾತನಾಡಿ ತುಳು ಚಿತ್ರಗಳನ್ನು ಯಾವತ್ತು ಕುಟುಂಬ ಸಮೇತರಾಗಿ ನಾವು ನೋಡ್ತೇವೆ, ಈ ತಂಡ ಈಗಾಗಲೇ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಯಶಸ್ವಿ ಚಿತ್ರ ನೀಡಿದ್ದು ಇದೀಗಾ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಿತ್ರ ತೆರೆಕಾಣಲಿದೆ. ಈ ಚಿತ್ರ ವೀಕ್ಷಿಸಣೆ ಮಾಡಿದವರಿಗೆ ರೋಹನ್ ಕಾರ್ಪೋರೇಷನ್ ವತಿಯಿಂದ ರೋಹನ್ ಕಾರ್ಪೋರೇಷನ್ನ ಯೋಜನೆಯಲ್ಲಿ ಶೇ ೧೦ % ರಿಯಾಯಿತಿ ನೀಡಲಾಗುತ್ತದೆ. ಎಂದವರು ಹೇಳಿದರು...ಸುದ್ದಿಗೋಷ್ಟಿಯಲ್ಲಿ ಚಿತ್ರ ನಟ ವಿನಿತ್, ನಟಿ ಸಮತ ಅಮೀನ್, ಚೈತ್ರ ಶೆಟ್ಟಿ, ನಿರ್ಮಾಪಕ ಆನಂದ್ ಕುಂಪಲ, ವಿತರಕ ಸಚಿನ್ ಉಪ್ಪಿನಂಗಡಿ, ನಟ ಸಾಹೀಲ್ ರೈ, ವಸ್ತ್ರ ವಿನ್ಯಾಸಕಿ ವರ್ಷ ಆಚಾರ್ಯ, ಸಹ ನಿರ್ಮಾಪಕರಾದ ನಿತಿನ್ ರಾಜ್ ಶೆಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ನೃತ್ಯ ಸಂಯೋಜಕ ವಿನಾಯಕ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.