ಬೆಂಗಳೂರು, ಜ.31 (DaijiworldNews/AA): ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ 29 ವರ್ಷಗಳು ಕಳೆದಿವೆ. ಈ ಹಿನ್ನೆಲೆ ನಟ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 29 ವರ್ಷಗಳು.. ಈವರೆಗಿನ ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವನೆ ಇದೆ. ಅಭಿಮಾನಿಗಳನ್ನು ರಂಜಿಸೋದು, ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕೆಲಸ. ನಿಮ್ಮಿಂದ ಸಿಕ್ಕಿರುವ ಸತತ ಪ್ರೀತಿ, ಬೆಂಬಲ ನನ್ನಲ್ಲಿ ಸ್ಫೂರ್ತಿ ತುಂಬುತ್ತಲೇ ಬರುತ್ತಿದೆ. ಅಂಥ ಡೆಡಿಕೇಟೆಡ್ ಅಭಿಮಾನಿಗಳನ್ನು ಹೊಂದಿರೋದು ನನ್ನ ಸೌಭಾಗ್ಯ ಎಂದು ಬರೆದುಕೊಂಡಿದ್ದಾರೆ.
ನೀವು ನೀಡುತ್ತಿರುವ ಬೆಂಬಲದಿಂದಲೇ ಪ್ರತಿ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ. ಅದ್ಯಾವ ಮಟ್ಟಿಗೆ ಅರ್ಥಪೂರ್ಣವಾಗಿದೆ ಎಂದು ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ಈ ಅದ್ಭುತವಾದ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಷ್ಟೇ ನಾನು ಹೇಳಬಲ್ಲೇ ಎಂದು ಪೋಸ್ಟ್ ಮಾಡಿದ್ದಾರೆ.