ಹೈದರಾಬಾದ್, ಫೆ.07 (DaijiworldNews/AA): ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಅವರು ನಟನೆಯೊಂದಿಗೆ ತಮ್ಮ ಸರಳತೆ ಮೂಲಕ ಗಮನ ನೆಳೆಯುತ್ತಾರೆ. ಇದೀಗ ನಿರ್ದೇಶನದತ್ತ ಆಸಕ್ತಿ ಹೊಂದಿದ್ದಾರೆ ಎಂದು ಅವರ ಭವಿಷ್ಯದ ಪ್ಲ್ಯಾನ್ ಬಗ್ಗೆ ನಾಗ ಚೈತನ್ಯ ಬಹಿರಂಗಪಡಿಸಿದ್ದಾರೆ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ 'ಥಾಂಡೇಲ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಚಾರದ ವೇಳೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸಾಯಿ ಪಲ್ಲವಿ ನಿರ್ದೇಶನದತ್ತ ಆಸಕ್ತಿ ಹೊಂದಿದ್ದಾರೆ ನಾಗ ಚೈತನ್ಯ ತಿಳಿಸಿದ್ದಾರೆ.
ಈ ಸಿನಿಮಾದ ಸಂದರ್ಶನದ ವೇಳೆ 'ನೀವು ಫಿಲ್ಮ್ ಡೈರೆಕ್ಷನ್ ಮಾಡುವ ಸಾಧ್ಯತೆ ಇದೆಯೇ' ಎಂದು ಸಾಯಿ ಪಲ್ಲವಿ ಅವರನ್ನ ಅಭಿಮಾನಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಇಲ್ಲ ಎನ್ನುವ ಉತ್ತರವನ್ನು ಸಾಯಿ ಪಲ್ಲವಿ ನೀಡಿದ್ದಾರೆ. ಇದು ಸುಳ್ಳು ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ.
'ಒಂದು ಸಿನಿಮಾ ನಿರ್ದೇಶನ ಮಾಡಬಹುದು ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳೋದಾಗಿಯೂ ತಿಳಿಸಿದ್ದಾರೆ' ಎಂದು ನಾಗ ಚೈತನ್ಯ ಅವರು ಸಾಯಿ ಪಲ್ಲವಿ ಅವರ ಭವಿಷ್ಯದ ಪ್ಲ್ಯಾನ್ಗಳನ್ನು ಬಹಿರಂಗಪಡಿಸಿದ್ದಾರೆ. ಬಳಿಕ 'ಅದು ನನಗೆ ನೆನಪಿದೆ' ಎಂದು ಸಾಯಿ ಪಲ್ಲವಿ ಒಪ್ಪಿಕೊಂಡಿದ್ದಾರೆ.