ಪೋರ್ಚುಗಲ್, ಫೆ.10 (DaijiworldNews/AA): ನಟ ಅಜಿತ್ ಕುಮಾರ್ ವಿದೇಶದಲ್ಲಿ ಮತ್ತೆ ಅಪಘಾತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಅಜಿತ್ ಕುಮಾರ್ ಅವರು ಪೋರ್ಚುಗಲ್ಗೆ ತೆರಳಿದ್ದು ರೇಸಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಪೋರ್ಚುಗಲ್ನ ಎಸ್ಟೊರಿಲ್ನಲ್ಲಿ ಟ್ರ್ಯಾಕ್ ಒಂದರಲ್ಲಿ ಅಜಿತ್ ಮೋಟರ್ಸ್ಪೋರ್ಟ್ಸ್ ರೇಸಿಂಗ್ ಟ್ರೇನಿಂಗ್ ಸೆಷನ್ ನಡೆಸುತ್ತಿದ್ದು, ಈ ವೇಳೆ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರು ಡ್ಯಾಮೇಜ್ ಆಗಿದ್ದು, ಅಜಿತ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
'ಇದೊಂದು ಸಣ್ಣ ಅಪಘಾತ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸಮಯ ನನ್ನ ಪರವಾಗಿತ್ತು. ಕಾರ್ ರೇಸ್ನಲ್ಲಿ ಮತ್ತೊಮ್ಮೆ ಗೆದ್ದು ನಮ್ಮ ಹೆಮ್ಮೆಯನ್ನು ಸ್ಥಾಪಿಸುತ್ತೇವೆ. ಅಪಘಾತದ ಸಮಯದಲ್ಲಿ ನಮಗೆ ಬೆಂಬಲ ನೀಡಿದ ಸ್ನೇಹಿತರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ' ಎಂದು ಅಜಿತ್ ಕುಮಾರ್ ತಿಳಿಸಿದ್ದಾರೆ.