ಮೈಸೂರು, ಫೆ.16 (DaijiworldNews/AA): ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಅವರು ಇಂದು ಹಸೆಮಣೆ ಏರಿದ್ದಾರೆ.

ಕನ್ನಡ ಅಷ್ಟೇ ಅಲ್ಲದೇ ಇತರೆ ಭಾಷೆಯ ಚಿತ್ರಗಳಲ್ಲಿ ನಟಿ ಸೈ ಎಂದೆಸಿನಿಕೊಂಡಿರುವ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಅವರ ವಿವಾಹವು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ನವಜೋಡಿಗೆ ಸಿನಿತಾರೆಯರು, ಗಣ್ಯರು, ಆಪ್ತರು, ಅಭಿಮಾನಿಗಳು ಆಗಮಿಸಿ ಶುಭಹಾರೈಸಿದ್ದಾರೆ.
ಡಾಲಿ ಧನಂಜಯ್ ಮದುವೆಗೆ ನಟ ಶಿವರಾಜ್ಕುಮಾರ್, ನಟಿ ರಮ್ಯಾ ವಸಿಷ್ಠ ಸಿಂಹ, ಯುವರಾಜ್ ಕುಮಾರ್, ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ, ವಿನಯ್ ರಾಜ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.