ಚೆನ್ನೈ,ಫೆ.17 (DaijiworldNews/AK): ಒಂದು ವಿಶೇಷವಾದ ಸೀರೆಯ ಸಲುವಾಗಿ ತಾವು ನ್ಯಾಷನಲ್ ಅವಾರ್ಡ್ ಪಡೆಯಬೇಕು ಎಂದು ಸಾಯಿ ಪಲ್ಲವಿ ಅವರು ಹೇಳಿದ್ದಾರೆ. ಆ ಸೀರೆಯನ್ನು ಕೊಟ್ಟಿರುವುದು ಅವರ ಅಜ್ಜಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಅಭಿಮಾನಿಗಳ ನಿರೀಕ್ಷೆಯಂತೆ ‘ಗಾರ್ಗಿ’ ಸಿನಿಮಾದಲ್ಲಿನ ನಟನೆಗೆ ಸಾಯಿ ಪಲ್ಲವಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಆದರೆ ಅದು ಮಿಸ್ ಆಯಿತು. ಮುಂದೊಂದು ದಿನ ಖಂಡಿತವಾಗಿಯೂ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂಬುದು ಫ್ಯಾನ್ಸ್ ನಂಬಿಕೆ. ಆ ದಿನ ಸಾಯಿ ಪಲ್ಲವಿ ಅವರು ಅಜ್ಜಿ ಕೊಟ್ಟ ಸೀರೆಯನ್ನು ಧರಿಸಲಿದ್ದಾರಂತೆ.
ಸಾಯಿ ಪಲ್ಲವಿ ಅವರಿಗೆ 21 ವರ್ಷ ವಯಸ್ಸಾಗಿದ್ದಾಗ ಅವರ ಅಜ್ಜಿ ಒಂದು ಸೀರೆಯನ್ನು ನೀಡಿದ್ದರು. ಮದುವೆಯ ದಿನ ಆ ಸೀರೆ ಧರಿಸಬೇಕು ಎಂದು ಅಜ್ಜಿ ಹೇಳಿದ್ದರು. ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದೇ ಆ ವಿಶೇಷ ಸಂದರ್ಭ. ಹಾಗಾಗಿ ಆ ದಿನ ಬರಲಿ ಎಂದು ಅವರು ಕಾಯುತ್ತಿದ್ದಾರೆ. ಪ್ರಶಸ್ತಿ ಪಡೆಯುವವರೆಗೂ ಆ ಒತ್ತಡ ತಮ್ಮ ಮೇಲೆ ಇದ್ದೇ ಇರುತ್ತದೆ ಎಂದು ಅವರು ಹೇಳಿದ್ದಾರೆ.ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾಗೆ ಸಾಯಿ ಪಲ್ಲವಿ ಅವರು ನಾಯಕಿ ಆಗಿದ್ದಾರೆ.