ಬೆಂಗಳೂರು, ಫೆ.22 (DaijiworldNews/AA): ಸ್ಯಾಂಡಲ್ವುಡ್ ನಟ ಯಶ್ ಅವರಿಗೆ ಕೆಜಿಎಫ್ ಸಿನಿಮಾ ಬಳಿಕ ಡಿಮ್ಯಾಂಡ್ ಹೆಚ್ಚಾಗಿದೆ. ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಬಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಾಗಿದೆ. ಸದ್ಯ ಯಶ್ ಅವರು 'ರಾಮಾಯಣ' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮುಂಬೈನಲ್ಲಿ ಅದ್ದೂರಿಯಾಗಿ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿದುಬಂದಿದೆ.

'ರಾಮಾಯಣ' ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದು, ಇದೀಗ ಈ ಸಿನಿಮಾದ ಶೂಟಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಯಶ್ ಅವರು ಫೆಬ್ರವರಿ 21ರಿಂದಲೇ 'ರಾಮಾಯಣ' ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. 2 ದಿನಗಳ ಕಾಲ ಕಾಸ್ಟ್ಯೂಮ್ ಟೆಸ್ಟ್ ಮಾಡಲಾಗಿದೆ. ಬಳಿಕ ಯುದ್ಧದ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ.
'ರಾಮಾಯಣ' ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶಿಸುತ್ತಿದ್ದು, ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಅವರು ಪಾಲುದಾರಿಕೆ ಹೊಂದಿದ್ದಾರೆ. ಹಾಗಾಗಿ ಯಶ್ ಅವರಿಗೆ ಈ ಸಿನಿಮಾ ತುಂಬಾ ಮಹತ್ವದ್ದಾಗಿದೆ.
ಮುಂಬೈನ ಅಕ್ಸಾ ಬೀಚ್ನಲ್ಲಿ ಯುದ್ಧದ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿದ್ದು, ಅದರಲ್ಲಿ ಯಶ್ ಪಾಲ್ಗೊಂಡಿದ್ದಾರೆ. ಯುದ್ಧದ ದೃಶ್ಯ ಆಗಿದ್ದರೂ ಕೂಡ ಇದರಲ್ಲಿ ರಣಬೀರ್ ಕಪೂರ್ ಅವರು ಭಾಗಿಯಾಗಿಲ್ಲ. ಮುಂದಿನ ದೃಶ್ಯಗಳನ್ನು ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುವುದು ಎನ್ನಲಾಗಿದೆ.