ಮುಂಬೈ, ಫೆ.28 (DaijiworldNews/AA): ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಗೆ ಗುಡ್ ನ್ಯೂಸ್ ನೀಡಿದ್ದಾರೆ.

ಈ ಬಗ್ಗೆ ಸಿದ್ಧಾರ್ಥ್ ಹಾಗೂ ಕಿಯಾರಾ ದಂಪತಿ, 'ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲಿಯೇ ಬರಲಿದೆ' ಎಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಂಪತಿ ಮಗುವಿನ ಪುಟ್ಟ ಶೂ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಿದ್ಧಾರ್ಥ್ ಹಾಗೂ ಕಿಯಾರ ದಂಪತಿಗೆ ಜಾಕ್ವೆಲಿನ್ ಫರ್ನಾಂಡಿಸ್, ರಾಶಿ ಖನ್ನಾ, ಏಕ್ತಾ ಕಪೂರ್, ಮನೀಶ್ ಮಲ್ಹೋತ್ರಾ, ಮನೀಶ್ ಪೌಲ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಫ್ಯಾನ್ಸ್ ಗಳು ಶುಭಕೋರುತ್ತಿದ್ದಾರೆ.