ಬೆಂಗಳುರು, ಮಾ.03(DaijiworldNews/TA): ಗಾಯಕಿ ಐಶ್ವರ್ಯಾ ರಂಗರಾಜನ್ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಭಸಂಗತಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಎಂಗೇಜ್ ಆಗಿದ್ದೀವಿ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಆಗುತ್ತಿರುವ ಹುಡುಗನನ್ನು ಐಶ್ವರ್ಯಾ ರಂಗರಾಜನ್ ಪರಿಚಯಿಸಿದ್ದಾರೆ.

ಫೋಟೋಗೆ "ಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್" ಎಂದು ಐಶ್ವರ್ಯ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಜೋಡಿಗೆ ನಟ ನಟಿಯರು ಮತ್ತು ಗಾಯಕ, ಗಾಯಕಿಯರೆಲ್ಲರೂ ಶುಭ ಹಾರೈಸುತ್ತಿದ್ದಾರೆ. ಐಶ್ವರ್ಯಾ ರಂಗರಾಜನ್ ಮಂಗಳೂರು ಹುಡುಗನ ಜೊತೆ ಉಂಗುರವನ್ನು ಬದಾಲಾಯಿಸಿ ಕೊಳ್ಳುವುದರ ಮೂಲಕ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ, ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ. ಇನ್ನೂ ಐಶ್ವರ್ಯಾ ಮದುವೆ ಆಗುತ್ತಿರುವ ಹುಡುಗ ಮಂಗಳೂರಿನವರು ಎಂಬುದು ಬಿಟ್ಟರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಐಶ್ವರ್ಯಾ ರಂಗರಾಜನ್ ಬರೀ ಗಾಯಕಿ ಅಷ್ಟೇ ಅಲ್ಲ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೂ ನಟಸಿದ್ದಾರೆ. ಸದ್ಯಕ್ಕೆ ಗಾಯನದ ಮೇಲೆ ಐಶ್ವರ್ಯಾ ಅವರು ಹೆಚ್ಚಾಗಿ ಗಮನ ಹರಿಸಿದ್ದಾರೆ. ದರ್ಶನ್ ನಟನೆಯ ʻಕ್ರಾಂತಿʼ ಸಿನಿಮಾದಲ್ಲಿ ಐಶ್ವರ್ಯಾ ರಂಗರಾಜನ್ ಹಾಡಿರುವ ʻಶೇಕ್ ಇಟ್ ಪುಷ್ಪವತಿʼ ಹಾಡು ಇಂದಿಗೂ ಟ್ರೆಂಡಿಂಗ್ನಲ್ಲಿದೆ.