ಬೆಂಗಳೂರು, ಮಾ.05 (DaijiworldNews/AA): ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಅವರು ಪತ್ನಿ ಮಿಲನಾ ನಾಗರಾಜ್ ಅವರನ್ನು ಬೆಸ್ಟ್ ಮದರ್ ಎಂದು ಹೊಗಳಿದ್ದಾರೆ.

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಮುದ್ದಾದ ಮಗಳು 'ಪರಿ'ಗೆ 6 ತಿಂಗಳು ತುಂಬಿದೆ. ಈ ವೇಳೆ ಮಗಳ ಹಾಗೂ ಪತ್ನಿಯ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಡಾರ್ಲಿಂಗ್ ಕೃಷ್ಣ ಮಿಲನಾ ಬೆಸ್ಟ್ ಮದರ್ ಎಂದು ಹೊಗಳಿದ್ದಾರೆ.
ನಮ್ಮ ಪುಟ್ಟ ತಾರೆಗೆ 6 ತಿಂಗಳ ಶುಭಾಶಯಗಳು. ನನ್ನ ಹೆಂಡತಿ ಸೂಪರ್ ಹೀರೋ ಆಗಿ ಅರ್ಧ ವರ್ಷ ಕಳೆದಿದೆ. ನನ್ನ ಅದ್ಭುತ ಹೆಂಡತಿ, ಅತ್ಯುತ್ತಮ ತಾಯಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಕೃಷ್ಣ ತಾವು ಶೇರ್ ಮಾಡಿರುವ ಫೋಟೋಗೆ ಶೀರ್ಷಿಕೆ ಹಾಕಿದ್ದಾರೆ.