ಉಡುಪಿ, ಮಾ.10(DaijiworldNews/TA) : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ರಾಜಕೀಯ ಧುರೀಣ ಜನಾರ್ದನ ಪೂಜಾರಿ ಹಾಗೂ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಇಂದು ಭೇಟಿ ನೀಡಿ ಶ್ರೀ ದೇವಿಯ ಆಶಿರ್ವಾದವನ್ನು ಪಡೆದರು.

ಇತ್ತಿಚಿಗಷ್ಟೇ ಕಾಪು ಕಾಪು ಶ್ರೀ ಮಾರಿಗುಡಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಅಂತ್ಯ ಗೊಂಡಿದೆ..ಕಾಪುವಿನ ಅಮ್ಮನ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಹಲವು ನಟ, ನಟಿಯರು,ನಾಯಕರು ಕಾಪುವಿನ ದೇಗುಲಕ್ಕೆ ಭೇಟಿ ನೀಡಿ ಶ್ರೀ ದೇವಿಯ ಆಶಿರ್ವಾದವನ್ನು ಪಡೆದುಕೊಂಡಿದ್ದರು. ಅದರಂತೆ ಇಂದು ಜನಾರ್ಧನ ಪೂಜಾರಿ ಹಾಗೂ ನಟ ರಕ್ಷಿತ್ ಶೆಟ್ಟಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವಿಯ ಆಶೀರ್ವಾದವನ್ನು ಪಡೆದರು.