ಬೆಂಗಳೂರು, ಮಾ.12 (DaijiworldNews/AA): ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ 'ದಿ ಡೆವಿಲ್' ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭವಾಗಿದ್ದು, ನಟ ದರ್ಶನ್ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಇಂದಿನಿಂದ ಮಾ.15ರವರೆಗೆ 'ದಿ ಡೆವಿಲ್' ಸಿನಿಮಾದ ಶೂಟಿಂಗ್ ಮಾಡಲು ಅನುಮತಿ ದೊರೆತಿದೆ. ಈ ಹಿನ್ನೆಲೆ, ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನು 9 ತಿಂಗಳ ಬಳಿಕ ಮತ್ತೆ ಮೈಸೂರಿನಲ್ಲಿ 'ದಿ ಡೆವಿಲ್' ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ.
ಈ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ದರ್ಶನ್ಗೆ ನಾಯಕಿಯಾಗಿ ರಚನಾ ರೈ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.