ಉಡುಪಿ, ಮಾ.16(DaijiworldNews/TA): ಉಡುಪಿ ಶ್ರೀ ಕೃಷ್ಣ ಮಠಕ್ಕೆ ನೆನಪಿರಲಿ ಸಿನಿಮಾ ಖ್ಯಾತಿಯ ನಟ ಪ್ರೇಮ್ ಭೇಟಿ ನೀಡಿದ್ದಾರೆ. ಪ್ರಾತಹ ಕಾಲದಲ್ಲಿ ನಡೆಯುವ ವಿಶೇಷ ಪೂಜೆಯನ್ನು ಕಣ್ತುಂಬಿ ಕೊಟ್ಟಿದ್ದಾರೆ ಈ ವೇಳೆ ನಟಿ ಶರಣ್ಯಶೆಟ್ಟಿ ಕೂಡಾ ಜೊತೆಗಿದ್ದರು.


ಪ್ರಾತ:ಕಾಲದಲ್ಲಿ ಉಡುಪಿ ಶ್ರೀ ಕೃಷ್ಣನ ವಿಶ್ವರೂಪದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿದರು.ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥರಿಂದ ಕೋಟಿಗೀತಾಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು. ಈ ವೇಳೆ ಮತದ ವತಿಯಿಂದ ನಟರನ್ನು ಗೌರವಿಸಲಾಯಿತು.