ಬೆಂಗಳೂರು, ಮಾ.18 (DaijiworldNews/AK):ನಟ ಪುನೀತ್ ರಾಜ್ಕುಮಾರ್ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರಲಿದೆ. ‘ಅಪ್ಪು’ ಹೆಸರಿನಲ್ಲೇ ಪುಸ್ತಕ ಬಿಡುಗಡೆಯಾಗಲಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಪುಸ್ತಕದ ಮುಖಪುಟ ರಿಲೀಸ್ ಮಾಡಿದ್ದಾರೆ.

ಅಭಿಮಾನಿಗಳ ನೆಚ್ಚಿನ ಹೆಸರು ಅಪ್ಪು. ಹಾಗಾಗಿ ಪುನೀತ್ ಬಯೋಗ್ರಫಿಗೆ ‘ಅಪ್ಪು’ಎಂದೇ ಹೆಸರಿಡಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಇದೀಗ ಬುಕ್ನ ಕವರ್ ಪೇಜ್ ಹೇಗಿದೆ ಎಂಬುದನ್ನು ಪುನೀತ್ ಜನ್ಮದಿನದಂದು (ಮಾ.17) ಅಶ್ವಿನಿ ರಿವೀಲ್ ಮಾಡಿದ್ದಾರೆ.
ಪುಸ್ತಕದ ಮುಖಪುಟ ರಿವೀಲ್ ಮಾಡುವಾಗ ಅಶ್ವಿನಿ ಜೊತೆ ಅಪ್ಪು ಪುತ್ರಿಯರು ಕೂಡ ಪೋಸ್ ನೀಡಿದ್ದಾರೆ. ಸದ್ಯ ಅಪ್ಪು ಬಯೋಗ್ರಫಿ ಬರಲಿರುವ ಸುದ್ದಿ ಕೇಳಿ ಅಭಿಮಾನಿಗಳು ಖುಷ್ ಆಗಿದ್ದು. ಅಶ್ವಿನಿ ಅವರೇ ಬರೆದಿದ್ದಾರೆ ಎಂದು ತಿಳಿದು ಪುಸ್ತಕದ ರಿಲೀಸ್ಗಾಗಿ ಎದುರು ನೋಡ್ತಿದ್ದಾರೆ.