ತಿರುವನಂತಪುರಂ, ಮಾ.22(DaijiworldNews/TA): ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀತ್ ಹಾಗೂ ಧನ್ವೀರ್ ಗೌಡ ಅವರುಗಳ ಜೊತೆಯಲ್ಲಿ ಕೇರಳದ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶತ್ರು ಸಂಹಾರ ಹೋಮಕ್ಕಾಗಿ ದರ್ಶನ್ ಕುಟುಂಬ ಸಮೇತ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಈ ದೇವಾಲಯದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳು ಸಹ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿರುತ್ತಾರೆ. ಈ ದೇವಾಲಯವು ಶತ್ರು ಸಂಹಾರ ಹೋಮಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ.

ಈ ದೇವಾಲಯದಲ್ಲಿ ಎಂಟು ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ. ಶತ್ರು ಸಂಹಾರ ಪೂಜೆ ಬಹಳ ವಿಶೇಷವಾದುದು. ಈ ಪೂಜೆಯನ್ನು ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಯ ನಡುವೆ ಈ ಪೂಜೆಯನ್ನು ಮಾಡಿಸಲಾಗುತ್ತದೆ. ಈ ವೇಳೆ ಪೂಜೆ ಮಾಡಿಸುವವರ ಹೊರತು ಇನ್ಯಾರೂ ದೇವಾಲಯದಲ್ಲಿ ಇರುವಂತಿಲ್ಲ. ಇದು ಇಲ್ಲಿನ ಪದ್ಧತಿ. ಈ ಪೂಜೆಗಳು ಬಹಳ ಗೌಪ್ಯವಾಗಿ ನಡೆಯುತ್ತವೆ ಎಂದು ಹೇಳಲಾಗಿದೆ.
ಇದೀಗ ಜೈಲುವಾಸದ ನಂತರ ನಟ ದರ್ಶನ್ ಈ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ದರ್ಶನ್, ಶತ್ರು ಕಾಟ ನಿವಾರಣೆಗಾಗಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.