ಮುಂಬೈ, ಮಾ.24 (DaijiworldNews/AA): 'ಸಿಕಂದರ್' ಸಿನಿಮಾದ ಟ್ರೈಲರ್ ರಿಲೀಸ್ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಈ ವೇಳೆ, ರಶ್ಮಿಕಾ ಮಂದಣ್ಣ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಸಲ್ಮಾನ್ ಖಾನ್ರನ್ನು ಟ್ರೋಲ್ ಮಾಡಿದವರಿಗೆ ನಟ ತಿರುಗೇಟು ನೀಡಿದ್ದಾರೆ.

ಟ್ರೋಲಿಗರಿಗೆ ತಿರುಗೇಟು ನೀಡಿದ ಸಲ್ಮಾನ್ ಖಾನ್, ಹೀರೋಯಿನ್ಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ರಶ್ಮಿಕಾಗೆ ನಾಳೆ ಮದುವೆಯಾಗ್ತಾರೆ, ಮುಂದೆ ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದು ಭಾವಿಸಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಮುಂದೆಯೂ ಕೂಡ ಅವರೊಂದಿಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸಲ್ಮಾನ್ ಅವರ ಈ ಹೆಳಿಕೆಗೆ ಹೌದು ಎಂದು ರಶ್ಮಿಕಾ ತಲೆಯಾಡಿಸಿದ್ದಾರೆ.
ಸಿಕಂದರ್' ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾದಿದ್ದಾರೆ ಎನ್ನುತ್ತಿದ್ದಂತೆ ಸಲ್ಮಾನ್ ಮತ್ತು ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ನಡೆದಿತ್ತು. ಸಲ್ಮಾನ್ಗಿಂತ ರಶ್ಮಿಕಾ 31 ವರ್ಷ ಚಿಕ್ಕವರು. ಹೀಗಾಗಿ ಸಲ್ಮಾನ್ರನ್ನು ಟ್ರೋಲ್ ಮಾಡಲಾಗಿತ್ತು.