ಚೆನ್ನೈ, ಮಾ.28(DaijiworldNews/AK) :ನಟಿ ಶ್ರೀಲೀಲಾ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತ ಆಗಿಲ್ಲ. ತೆಲುಗಿನಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಆಫರ್ಗಳು ಬರುತ್ತಿವೆ. ಹಿಂದಿ ಚಿತ್ರರಂಗದ ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಇವರಿಬ್ಬರು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಕಾರ್ತಿಕ್ ಆರ್ಯನ್ ಅವರು ಶ್ರೀಲೀಲಾ ಜೊತೆಗಿನ ಒಂದು ಫೋಟೋ ಹಂಚಿಕೊಂಡು ‘ತು ಮೇರಿ ಜಿಂದಗಿ ಹೈ’ (ನೀನೇ ನನ್ನ ಜೀವನ) ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೊಟೋ ನೋಡಿ ಗುಸುಗುಸು ಸುದ್ದಿ ಹಬ್ಬಿದೆ.ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಅವರಿಬ್ಬರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.