ಹೈದರಾಬಾದ್, ಏ.17(DaijiworldNews/TA): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಹುಡುಗರು ಸಿನಿಮಾದಲ್ಲಿ ನಟಿಸಿದ್ದ ನಟಿ ಅಭಿನಯ ಏ.16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಬಹುಕಾಲದ ಗೆಳೆಯನ ಜೊತೆ ನಟಿ ವಿವಾಹವಾಗಿದ್ದಾರೆ.

ನಟಿ ಅಭಿನಯ ತಮ್ಮ ಬಾಲ್ಯದ ಗೆಳೆಯ ವೇಗೇಶನಾ ಕಾರ್ತಿಕ್ ಅವರನ್ನು ವಿವಾಹವಾಗುವ ಮೂಲಕ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು . ಸುಮಾರು 15 ವರ್ಷಗಳ ಪ್ರೀತಿಯ ಪಯಣಕ್ಕೆ ಹೈದರಾಬಾದ್ನಲ್ಲಿ ವಿವಾಹದ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಮಾರ್ಚ್ 9ರಂದು ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಅಭಿನಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ ಹುಡುಗನ ಹಿನ್ನೆಲೆ ಮತ್ತು ಮದುವೆ ಯಾವಾಗ ಎಂಬುವುದಾಗಿ ರಿವೀಲ್ ಮಾಡಿರಲಿಲ್ಲ. ಈಗ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.