ಬೆಂಗಳೂರು, ಏ.18(DaijiworldNews/AK):ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆಗಿದ್ದಾರೆ.

ಇಟಲಿಯಲ್ಲಿ ಗೆಳೆಯನ ಜೊತೆ ಅಂಜನಾ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಂಜನಾ ಫೋಟೋಶೂಟ್ನಲ್ಲಿ ಅರ್ಜುನ್ ಸರ್ಜಾ ದಂಪತಿ, ಸಹೋದರಿ ಐಶ್ವರ್ಯಾ ದಂಪತಿ ಕೂಡ ಪೋಸ್ ನೀಡಿದ್ದಾರೆ. ಮಗಳ ಪ್ರೀತಿಗೆ ಅರ್ಜುನ್ ಸರ್ಜಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಂಜನಾ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಗೆಳೆಯನ ಪ್ರೇಮ ನಿವೇದನೆಗೆ ‘ಯೆಸ್ ಎನ್ನದೇ ಹೇಗಿರಲಿ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಅರ್ಜುನ್ ಸರ್ಜಾ, ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಅಂತ ಕಾಮೆಂಟ್ ಮಾಡಿದ್ದಾರೆ.
ಫಾರಿನ್ ಹುಡುಗ ಐಸೆಯ ಜೊತೆ ಅಂಜನಾ ಎಂಗೇಜ್ ಆಗಿದ್ದು, ಅವರ ಮದುವೆಯ ಬಗ್ಗೆ ಇನ್ನೂ ಅಪ್ಡೇಟ್ ತಿಳಿಯಬೇಕಿದೆ. ಒಟ್ನಲ್ಲಿ ಅಂಜನಾ ಅವರ ಸಂಗಾತಿಯ ಆಯ್ಕೆ ಬಗ್ಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.