ಹೈದರಾಬಾದ್, ಮೇ. 10 (DaijiworldNews/AA): ಭಾರತದ ಅನೇಕ ಸೆಲೆಬ್ರಿಟಿಗಳು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಬೆಂಬಲಿಸಿದ್ದಾರೆ. ಇದೀಗ ನಟ ವಿಜಯ್ ದೇವರಕೊಂಡ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಜಯ್ ದೇವರಕೊಂಡ ದಕ್ಷಿಣದ ಜನಪ್ರಿಯ ನಟನಾಗಿದ್ದು, ಅವರು ಭಾರತೀಯ ಸೇನೆಯನ್ನು ವಿಭಿನ್ನ ರೀತಿಯಲ್ಲಿ ಗೌರವಿಸಿದ್ದಾರೆ. ತಮ್ಮ ಫ್ಯಾಷನ್ ಬ್ರ್ಯಾಂಡ್ನಿಂದ ಬರುವ ಆದಾಯದ ಒಂದು ಭಾಗವನ್ನು ಭಾರತೀಯ ಸೇನೆಗೆ ಅರ್ಪಿಸಲು ನಟ ನಿರ್ಧರಿಸಿದ್ದಾರೆ. ವಿಜಯ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಅವರು ಶನಿವಾರ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ಅವರು ತಮ್ಮ ಫ್ಯಾಷನ್ ಬ್ರ್ಯಾಂಡ್ RWDY ನಿಂದ ಬರುವ ಆದಾಯದ ಒಂದು ಭಾಗವನ್ನು ಭಾರತೀಯ ಸೇನೆಗೆ ನೀಡುವುದಾಗಿ ಘೋಷಿಸಿದ್ದಾರೆ.
ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅವರು, "ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಇಂಡಿಯಾ ಮಾತ್ರವಲ್ಲ, ಸ್ವಲ್ಪ ಸಮಯದವರೆಗೆ RWDY ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಭಾರತೀಯ ಸೇನೆಗೆ ದಾನ ಮಾಡಲಾಗುವುದು, ಜೈ ಹಿಂದ್" ಎಂದು ತಿಳಿಸಿದ್ದಾರೆ.