ಮುಂಬೈ, ಜು. 01 (DaijiworldNews/AA): "ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ಬೆಸ್ಟ್ ಫ್ರೆಂಡ್ ಅಂತಾ ಇಲ್ಲ" ಎಂದು ಬಹುಭಾಷಾ ನಟಿ ನಯನತಾರಾ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಿಮಗೆ ಇಂಡಸ್ಟ್ರಿಯಲ್ಲಿ ಕ್ಲೋಸ್ ಫ್ರೆಂಡ್ಸ್ ಯಾರಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, "ಒಂದು ಸಿನಿಮಾ ಮುಗಿದ ಬಳಿಕ ಮತ್ತೊಂದು ಸಿನಿಮಾ ಮಾಡಬೇಕಾದರೆ ಹೊಸ ಜನರ ಪರಿಚಯವಾಗುತ್ತೆ. ಆ ಸಿನಿಮಾ ಮುಗಿದ್ಮೇಲೆ ಮತ್ತೆ ಹೊಸ ಹೊಸ ಜನರ ಜೊತೆ ಕೆಲಸ ಮಾಡಬೇಕಾಗುತ್ತೆ. ಹೀಗಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ"
ಎಂದಿದ್ದಾರೆ.
ನಯನತಾರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನೇರವಾಗಿ ಆಡಿದ ಮಾತುಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ. ಮದುವೆಯಾದ ಬಳಿಕ ಸಿನಿಮಾಗಳಿಗಿಂತ ಫ್ಯಾಮಿಲಿಗೆ ಜಾಸ್ತಿ ಟೈಂ ಕೊಡ್ತಿರುವ ನಯನತಾರಾ ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಳ್ತಿದ್ದಾರೆ.