ಮುಂಬೈ, ಜು. 02 (DaijiworldNews/AK):ವಿಷ್ಣುಮಂಚು ಅಭಿನಯದ ಕಣ್ಣಪ್ಪ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಿದೆ ಈ ಚಿತ್ರದಲ್ಲಿ ಹಲವು ಭಾಷೆಯ ವಿವಿಧ ಖ್ಯಾತ ಕಲಾವಿದರು ನಟಿಸಿದ್ದಾರೆ.

ವಿಷ್ಣು ಮಂಚು ಕಣ್ಣಪ್ಪನಾಗಿ ಅಭಿನಯಿಸಿದರೆ ಅತಿಥಿ ಪಾತ್ರಗಳಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್ ಅಭಿನಯಿಸಿದ್ದಾರೆ. ಗೆಸ್ಟ್ ಅಪೀಯರೆನ್ಸ್ ಮಾಡಿದ್ದ ಬೇರೆ ಭಾಷೆ ಕಲಾವಿದರು ಉಚಿತವಾಗಿಯೇ ಅಭಿನಯಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಅಕ್ಷಯ್ ಕುಮಾರ್ ಶಿವನ ಪಾತ್ರಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದು ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶಿವನ ಪಾತ್ರ ಮಾಡಿದ್ದ ಅಕ್ಷಯ್ ಕುಮಾರ್ 5 ದಿನದ ಕಾಲ್ಶೀಟ್ಗಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಐದೇ ದಿನದ ಕಾಲ್ಶೀಟ್ಗೆ ಅಕ್ಷಯ್ 10 ಕೋಟಿ ಪಡೆದುಕೊಂಡು ಹೋಗಿರುವುದು ಟಾಲಿವುಡ್ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ.